ಸಂಬರಗಿ: ಖೀಳೆಗಾಂವ ಗ್ರಾಮದಲ್ಲಿ ಬುದ್ಧ ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಬಿ.ಎಸ್.ಎಸ್. ಅಥಣಿ ತಾಲೂಕಾ ಸಂಚಾಲಕ ಸೋನು ಅಟವಲೆ, ವಿಜಯ ಅಟವಲೆ, ನಿಖೀಲ ಕಾಂಬಳೆ, ಉಮೇಶ ಅಟವಲೆ, ವಿನೋದ ಅಟವಲೆ, ಕಿರಣ ಕಾಂಬಳೆ, ಲೊಕೇಶ ಅಟವಲೆ, ಆಕಾಶ ಅಟವಲೆ ಸುಭಾಷ ಕಾಂಬಳೆ ಸೇರಿದ ಅನೇಕ ಗಣ್ಯರು ಇದ್ದರು.
ಶಿರೂರ ಗ್ರಾಮದಲ್ಲಿ ಬುದ್ಧ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ನವ ಬೌದ್ಧ ಯುವಕ ಮಂಡಳ ಅಧ್ಯಕ್ಷ ಸಂದಿಪ ಕಾಂಬಳೆ, ಮಚ್ಚೇಂದ್ರ ಖಾಂಡೆಕರ ಬುದ್ಧ ಹಾಗೂ ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ರಾಹುಲ್ ಕಾಂಬಳೆ, ಸುನಿಲ ಖಾಂಡೆಕರ, ಬಾಬು ಕಾಂಬಳೆ ಸೇರಿದ ಇತರರು ಇದ್ದರು.
Advertisement
ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ನಿಂಬಾಳ ಬುದ್ಧ ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ ಮತ್ತು ದುಃಖ ನಿವಾರಣೆ ಮಾರ್ಗ ಕಂಡು ಹಿಡಿದ ದಾರ್ಶನಿಕ ಎಂದರು.