ಜೋಹಾನ್ಸ್ ಬರ್ಗ್(ದಕ್ಷಿಣ ಆಫ್ರಿಕಾ):ಆರು ದಶಲಕ್ಷ ಆಫ್ರಿಕನ್ ರಾಂಡ್ (ಅಂದಾಜು 3.22 ಕೋಟಿ) ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:66 ದಿನಗಳ ಬಳಿಕ ಭಾರೀ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಯಲ್ಲಿ 86,498 ಸೋಂಕು ಪ್ರಕರಣ ಪತ್ತೆ
ಗಾಂಧಿ ಮರಿ ಮೊಮ್ಮಗಳಾದ ಆಶೀಶ್ ಲತಾ ರಾಮ್ ಗೋಬಿಬ್ ದೋಷಿ ಎಂದು ಡರ್ಬಲ್ ಕೋರ್ಟ್ ಸೋಮವಾರ(ಜೂನ್ 07) ದೋಷಿ ಎಂದು ತೀರ್ಪು ನೀಡಿತ್ತು. ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ ಆಫ್ರಿಕಾದ ಉದ್ಯಮಿ ಎಸ್.ಆರ್.ಮಹಾರಾಜ್ ಎಂಬವರ ಬಳಿ ಲತಾ ರಾಮ್ 6.2 ದಶಲಕ್ಷ ರಾಂಡ್ ಹಣ ಪಡೆದಿದ್ದರು. ಅಲ್ಲದೇ ತಾವು ಗಳಿಸಿದ ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿ, ಲತಾ ವಂಚಿಸಿರುವುದಾಗಿ ಉದ್ಯಮಿ ಆರೋಪಿಸಿ ದೂರು ನೀಡಿದ್ದರು.
ಹೋರಾಟಗಾರ್ತಿ ಎಲಾ ಗಾಂಧಿ ಮತ್ತು ದಿ. ಮೇವಾ ರಾಮ್ ಗೋಬಿನ್ ಅವರ ಪುತ್ರಿ ಲತಾ ರಾಮ್ ಗೋಬಿನ್. ಶಿಕ್ಷೆ ಮತ್ತು ದೋಷಿ ಎಂದು ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನೂ ಡರ್ಬನ್ ವಾಣಿಜ್ಯ ವ್ಯಾಜ್ಯಗಳ ವಿಶೇಷ ಕೋರ್ಟ್ ನಿರಾಕರಿಸಿದೆ ಎಂದು ವರದಿ ವಿವರಿಸಿದೆ.
2015ರಿಂದಲೂ ಲತಾ ರಾಮ್ ಗೋಬಿನ್ ವಿರುದ್ಧ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳು ಹಡಗಿನ ಮೂಲಕ ಬರಲಿದೆ ಎಂದು ಉದ್ಯಮಿಯನ್ನು ನಂಬಿಸಿದ್ದರು ಎಂದು ಕೋರ್ಟ್ ನಲ್ಲಿ ಆರೋಪಿಸಲಾಗಿತ್ತು. ಏತನ್ಮಧ್ಯೆ ಕೋರ್ಟ್ 50 ಸಾವಿರ ರಾಂಡ್ ಆಧಾರದ ಮೇಲೆ ಲತಾಗೆ ಜಾಮೀನು ನೀಡಿತ್ತು ಎಂದು ವರದಿ ಹೇಳಿದೆ.