Advertisement

ಮಹಾತ್ಮ ಗಾಂಧಿ ಮೊಮ್ಮಗ ಅರುಣ್‌ ನಿಧನ

09:39 PM May 02, 2023 | Team Udayavani |

ಮುಂಬೈ: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ಅರುಣ್‌ ಗಾಂಧಿ (89) ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿಧನರಾಗಿದ್ದಾರೆ. 1934 ಏ.14ರಂದು ಮಣಿಲಾಲ್‌ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ಅವರಿಗೆ ಜನಿಸಿದ್ದ ಅರುಣ್‌ ಗಾಂಧಿಯವರು ಲೇಖಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅಜ್ಜ ಮಹಾತ್ಮ ಗಾಂಧಿಯವರಂತೆಯೇ ಕೆಲವೊಂದು ಹೋರಾಟಗಳಲ್ಲಿಯೂ ಪಾಲ್ಗೊಂಡಿದ್ದರು. ಅವರ ಅಂತ್ಯಕ್ರಿಯೆ ಕೊಲ್ಹಾಪುರದಲ್ಲಿಯೇ ನಡೆಯಿತು ಎಂದು ಪುತ್ರ ತುಷಾರ್‌ ಗಾಂಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next