Advertisement

Huge Controversy!: ಮಹಾತ್ಮಾ ಗಾಂಧಿ ಕಪಟಿ; ರಾಹುಲ್‌ ಗಾಂಧಿ ಬೆಸ್ಟ್‌

02:13 AM May 04, 2024 | Team Udayavani |

ಗಾಂಧಿನಗರ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನೇ ಕಪಟಿ ಎಂದಿರುವ ಗುಜರಾತ್‌ನ ಕಾಂಗ್ರೆಸ್‌ ಮಾಜಿ ಶಾಸಕರೊಬ್ಬರು, “ಗಾಂಧಿ ಅವರಿಗಿಂತಲೂ ರಾಹುಲ್‌ ಗಾಂಧಿಯೇ ಶ್ರೇಷ್ಠ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ಮೇ 1ರಂದು ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಇಂದ್ರನೀಲ್‌ ರಾಜ್‌ಗುರು, “ಬೇಕಿದ್ದರೆ ಬರೆದಿಟ್ಟುಕೊಳ್ಳಿ. ಭವಿಷ್ಯದಲ್ಲಿ ರಾಹುಲ್‌ ಗಾಂಧಿ ಅವರೇ ಮುಂದಿನ ಮಹಾತ್ಮಾ ಗಾಂಧಿ ಆಗಿ ಹೊರಹೊಮ್ಮಲಿದ್ದಾರೆ. ಗಾಂಧಿ ಅವರು ಸ್ವಲ್ಪ ಮಟ್ಟಿಗೆ ಕಪಟ ಸ್ವಭಾವದವರಾಗಿದ್ದರೂ, ರಾಹುಲ್‌ ಗಾಂಧಿ ಸಂಪೂರ್ಣವಾಗಿ ಪ್ರಾಮಾಣಿಕ ಮತ್ತು ಹೃದಯ ವಂತರಾಗಿದ್ದಾರೆ’ ಎಂದಿದ್ದರು.

Advertisement

ಕೆಲವರು ಅವರನ್ನು ಪಪ್ಪು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ದೇಶದ ಪ್ರಜೆಗಳು ರಾಹುಲ್‌ ಗಾಂಧಿಯವರನ್ನು ನಾಯಕರು ಎಂದು ಒಪ್ಪಿಕೊಂಡಿದ್ದಾರೆ ಎಂದು ಭಾಷಣದಲ್ಲಿ ತಿಳಿಸಿದ್ದಾರೆ.

ಇಂದ್ರನೀಲ್‌ರ ಈ ವಿವಾದಾತ್ಮಕ ಹೇಳಿಕೆ ವೈರಲ್‌ ಆಗುತ್ತಿದ್ದಂತೆ, ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. “ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಾ ರನ್ನೇ ಅವಹೇಳನ ಮಾಡಲಾಗಿದೆ. ಈ ರೀತಿಯ ಕೀಳು ಹೇಳಿಕೆಗಳನ್ನು ಜನ ಕ್ಷಮಿಸುವುದಿಲ್ಲ’ ಎಂದಿದ್ದಾರೆ. ಗಾಂಧಿ ಅವರು “ಬುದ್ಧಿವಂತರು’ ಎಂಬರ್ಥದಲ್ಲಿ ಕಪಟಿ ಪದ ಬಳಸಿದ್ದೇನೆ. ಗಾಂಧಿ ಅವರು ಕಪಟಿ ಎಂಬುದಾಗಿ ಹಲವು ಪುಸ್ತಕಗಳಲ್ಲಿ ಉಲ್ಲೇಖವಿದೆ ಎಂದು ಇಂದ್ರನೀಲ್‌ ಸಮರ್ಥಿಸಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next