Advertisement

ರಸ್ತೆ ಇಲ್ಲದ ಗ್ರಾಮದ ಕೂಲಿ ಕೆಲಸಗಾರರಿಗೆ ನೆರವಾದ ನರೇಗಾ ಯೋಜನೆ

10:09 PM Jun 23, 2020 | Hari Prasad |

ಗಂಗಾವತಿ: ಕೊವಿಡ್-19 ಮಹಾಮಾರಿ ವ್ಯಾಪಿಸಿತ್ತಿರುವ ಸಮಯದಲ್ಲಿ ಗ್ರಾಮೀಣ ಭಾಗದ ಕೃಷಿ ಕೂಲಿಕಾರರಿಗೆ ಮತ್ತು ಗ್ರಾಮಗಳಿಗೆ ವಾಪಸ್ ಬಂದಿರುವ ವಲಸೆ ಕಾರ್ಮಿಕರ ನೆರವಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಸರಕಾರದ ಗರೀಬ್ ಕಲ್ಯಾಣ ಹಾಗೂ ಅನ್ನ ಭಾಗ್ಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿರುವ ಅಧಿಕಾರಿಗಳಿಂದ ಗ್ರಾಮೀಣ ಜನತೆ ನೆಮ್ಮದಿಯಿಂದ ಇದ್ದಾರೆ.

Advertisement

ತಾಲೂಕಿನ ಆಗೋಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನ ದುರ್ಗಾ ವ್ಯಾಪ್ತಿಯ ಬೆಟ್ಟಗುಡ್ಡ ಪ್ರದೇಶದಲ್ಲಿ ಕಳೆದ 60 ವರ್ಷಗಳಿಂದ ಕೃಷಿಮಾಡಿ ಬದುಕುತ್ತಿರುವ 30 ಕ್ಕೂ ಹೆಚ್ಚು ಕುಟುಂಬಗಳಿಗೆ ತಾಲೂಕು ಆಡಳಿತ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಹೊಲದಲ್ಲಿ ಬದುವು ಹಾಕಿಕೊಳ್ಳುವ ನೆಪದಲ್ಲಿ ಕೂಲಿ ಕೆಲಸ ಕೊಟ್ಟಿತ್ತು.

ಗುಡ್ಡದ ಕ್ಯಾಂಪಿನ ಜನರು ಅಚ್ಚುಕಟ್ಟಾಗಿ ತಮ್ಮ ಹೊಲಗಳಿಗೆ ಬದುವು ನಿರ್ಮಿಸಿಕೊಂಡಿದ್ದಾರೆ. ಕೂಲಿಕೆಲಸ ಮಾಡಿದವರಿಗೆ ಬ್ಯಾಂಕ್ ಮತ್ತು ತಾ.ಪಂ.ಅಧಿಕಾರಿಗಳು ಅವರ ಮನೆಗೆ ತೆರಳಿ ಕೂಲಿ ಹಣ ಪಾವತಿ ಮಾಡು ಮೂಲಕ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದಾರೆ.

30 ಜನ ಕೂಲಿಕಾರರಿಗೆ 7 ದಿನಕ್ಕೆ 56,0000 ರೂ.ಪಾವತಿ ಮಾಡಲಾಯಿತು. ಗ್ರಾಮಕ್ಕೆ ಸಂಪರ್ಕ ಇಲ್ಲದೆ ಬೆಟ್ಟದಲ್ಲಿ ವಾಸ ಮಾಡುತ್ತಿರುವ ಜನರಿಗೆ ಅಧಿಕಾರಿಗಳು ನಡೆದುಕೊಂಡು ಬಂದು ಕೆಲಸ ನೀಡಿ ಅವರಲ್ಲಿಗೆ ಬಂದು ಕೂಲಿ ಹಣ ಪಾವತಿ ಮಾಡಿದ್ದಕ್ಕೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆಂದು ತಾ.ಪಂ ಇ.ಒ. ಡಾ. ಮೋಹನ ಕುಮಾರ ಉದಯವಾಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next