Advertisement

ಮಾ.1ರಿಂದ 10 ದಿನಗಳ ಕಾಲ ಮಹಾರಾಷ್ಟ್ರ ವಿಧಾನಸಭೆ ಬಜೆಟ್‌ ಅಧಿವೇಶನ

07:43 PM Feb 25, 2021 | Team Udayavani |

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಬಜೆಟ್‌ ಅಧಿವೇಶನವು ಮಾರ್ಚ್‌ 1ರಿಂದ 10ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಿಲ್‌ ಪರಬ್‌ ಗುರುವಾರ ಮಾಹಿತಿ ನೀಡಿದ್ದಾರೆ.

Advertisement

ಇದಕ್ಕೂ ಮುನ್ನ, ಕೊರೊನಾ ವೈರಸ್‌ ಹೆಸರು ಹೇಳಿ ಸರ್ಕಾರವು ಬಜೆಟ್‌ ಅಧಿವೇಶನದ ಅವಧಿಯನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಅನಿಲ್‌ ಪರಬ್‌, “ಅಧಿವೇಶನ ಕಡಿತಗೊಳಿಸಲು ಪ್ರಯತ್ನಿಸಿರುವುದು ನಾವಲ್ಲ. ಅಧಿವೇಶನ ಒಂದೇ ದಿನ ನಡೆದರೆ ಸಾಕು ಎಂದು ಹೇಳಿರುವುದು ಪ್ರತಿಪಕ್ಷಗಳು’ ಎಂದು ತಿರುಗೇಟು ನೀಡಿದ್ದಾರೆ.

ಮಾ.1ರಂದು ರಾಜ್ಯಪಾಲರ ಭಾಷಣದ ಮೂಲಕ ಅಧಿವೇಶನ ಆರಂಭವಾಗಲಿದೆ. ಮಾ.8ರಂದು ಬಜೆಟ್‌ ಮಂಡಿಸಲಾಗುತ್ತದೆ. ಕೆಲವು ವಿಧೇಯಕಗಳನ್ನೂ ಮಂಡಿಸಲು ನಿರ್ಧರಿಸಲಾಗಿದೆ. ಪ್ರತಿಪಕ್ಷಗಳು ಒಂದೇ ದಿನ ಅಧಿವೇಶನ ನಡೆಸುವಂತೆ ಕೇಳಿಕೊಂಡವು. ಆದರೆ, ನಾವು 10 ದಿನ ನಡೆಸಲು ನಿರ್ಧರಿಸಿದ್ದೇವೆ ಎಂದೂ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:ಮುಂಬೈಯಲ್ಲಿ ಕೋವಿಡ್ ಭೀತಿ : ಫೆ.26 ರಿಂದ ಅನಿರ್ಧಿಷ್ಟ ಕಾಲ ಓವಲ್‌ ಮೈದಾನ ಬಂದ್‌

Advertisement

Udayavani is now on Telegram. Click here to join our channel and stay updated with the latest news.

Next