Advertisement

ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳ ಅಭಿಪ್ರಾಯ

05:04 PM Nov 25, 2019 | keerthan |

ಮಣಿಪಾಲ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಕೆಲವು ಇಲ್ಲಿವೆ

Advertisement

ಪ್ರಶಾಂತ್ ಕುಮಾರ್: ಒಳ್ಳೆಯ ಬೆಳವಣಿಗೆ ಅಲ್ಲ. ಆದರೂ ರಾಜ್ಜದ ಹಿತ ದೃಷ್ಟಿಯಲ್ಲಿ ಅನಿವಾರ್ಯ. 3 ಪಕ್ಷ ಸೇರಿ ಸರಕಾರ ರಚನೆ ಜಾಸ್ತಿ ದಿನ ಇರೋದು ಕಷ್ಟ, ಮತೊಮ್ಮೆ ಚುನಾವಣೆಯ ಖರ್ಚಿನಿಂದ ಪಾರಾಗಲು ಒಳ್ಳೆಯ ನಿರ್ಧಾರ.

ಶ್ರೀಧರ್ ಉಡುಪ: ಚುನಾವಣೋತ್ತರ ಅಪವಿತ್ರ ಮೈತ್ರಿಯಿಂದ ಮತದಾರರು ಮೂರ್ಖರಾಗುತ್ತಿದ್ದಾರೆ. ಬಿಜೆಪಿಯು ಕಾಂಗ್ರೆಸಿನೊಡನೆ ಕೈ ಜೋಡಿಸಿ ಸರ್ಕಾರ ರಚಿಸುವ ದಿನಗಳು ಮುಂದೆ ಬಂದರೊ ಆಶ್ಚರ್ಯವೇನಿಲ್ಲ.

ರಮೇಶ್ ತಿಂಗಳಾಯ: ಮಾಧ್ಯಮ ಜನಪರವಾಗಿ ಕೆಲಸ ಮಾಡುತ್ತ ಇದ್ದರೆ ರಾಜಕೀಯ ಅನ್ನೋದು ಇಷ್ಟೊಂದು ಅಧೋಗತಿಗೆ ಬರುತ್ತಿರಲಿಲ್ಲ. ನಾಯಕರಿಗೆ ಭಯ ಇರುತ್ತಿತ್ತು.

ಜಯರಾಮ ಬಾಯಾರು: ಮಹಾರಾಷ್ಟ್ರ ದ ಜನತೆ ಆಯ್ಕೆ ಮಾಡಿದ್ದು ಬಿಜೆಪಿ, ಶಿವಸೇನೆ ಮೈತ್ರಿಯನ್ನು. ಆದರೆ ಇಂದು ಇವೆರಡೂ ಪಕ್ಷಗಳು ತಮ್ಮ ಪ್ರತಿಷ್ಟೆ, ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಮೌಲ್ಯವನ್ನೇ ಹರಾಜಿಗಿಟ್ಟಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಈದೆ ತರಹದ ಆಟ ಆಡಿ ಜನರ ಟ್ಯಾಕ್ಸ್ ಹಣವನ್ನು ಉಪಯೊಗಿಸಿ ಮತ್ತೆ ಚುನಾವಣೆ ನಡೆದಿದೆ . ಶಿವಸೇನೆ ಚುನಾವಣೆಯಲ್ಲಿ ಇದೆ ಮಾತು ಜನರಿಗೆ ಹೇಳಿ ಮತ ಯಾಚನೆ ಮಾಡಿದ್ದಿದರೆ ಬೇರೆ ಮಾತು , ಫಲಿತಾಂಶ ಬಂದಮೇಲೆ ಈ ಆಟ ಆಡಿದ್ದಾರೆ .

Advertisement

ನರಸಿಂಹ ಸಾಗರ್: ಪ್ರಜಾಪ್ರಭುತ್ವಕ್ಕೆ ಇದು ಒಳ್ಳೆಯ ಬೆಳವಣಿಗೆ ಅಲ್ಲಾ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಮತಕೊಟ್ಟ ಮತದರನಿಗೆ ಬೆಲೆಯೇ ಇಲ್ಲದಂತಹ ಬೆಳವಣಿಗೆಗಳು ಎಲ್ಲ ರಾಜ್ಜಗಳಲ್ಲೂ ಸೃಷ್ಟಿಯಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲ ರಾಜ್ಜಗಳಿಗೂ ಅನ್ವಯವಾಗುವಂತೆ ಪಕ್ಷಾಂತರ ನಿಷೇಧ ಕಾನೂನಿಗೆ ಇನ್ನು ಬಲ ಅವಶ್ಯಕತೆ ಇದೆ.

ಶೇಕ್ ನಜೀರ್: ದೇಶದ ಸಂವಿಧಾನ ಮತ್ತು ಕಾನೂನು ಕೈ ಗೊಂಬೆಯಾದರೆ ದರ್ಪದ ರಾಜಕೀಯದಲ್ಲಿ ಇನ್ನೇನು ಊಹಿಸ ಬಹುದು
ಪ್ರತಿಯೋಬ್ಬರಲ್ಲಿ ನಾನು ಎಂಬ ಪದದ ಆಹಂಕಾರ ತುಂಬಿ ಕೂಂಡಿದೆ ಇದಕ್ಕೆ ವಿರುದ್ಧವಾಗಿ ಇದರ ಉತ್ತರ ಪಕ್ರತಿಯೇ ಕೂಡಲಿದೆ ಕಾದು ನೋಡಿ

ರಮೇಶ್ ಉದ್ಯಾವರ: ಮತದಾರನ ಮತಕ್ಕೆ ಬೆಲೆ ಇಲ್ಲ. ಮತದಾರರನ ಸಮಸ್ಯೆಯನ್ನು ಅರ್ಥೈಸುವ ಯಾವುದೇ ನೈಜ ರಾಜಕೀಯ ವ್ಯಕ್ತಿ ಈವರೆಗೂ ಹುಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next