Advertisement

ಲಾತೂರ್‌ ಜಿಲ್ಲೆಯ ಹಳ್ಳಿಯಲ್ಲಿ ವೈ ಫೈ; ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅನುಕೂಲ

07:16 PM Aug 29, 2021 | Team Udayavani |

ಮುಂಬೈ: ಕೋವಿಡ್‌ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಆನ್‌ಲೈನ್‌ ಪಾಠಗಳನ್ನು ಕೇಳಲು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದ ಬಗ್ಗೆ ದೇಶದ ಮೂಲೆ ಮೂಲೆಗಳಿಂದ ವರದಿಗಳು ಆಗಾಗ ಪ್ರಕಟವಾಗುತ್ತಿದ್ದವು. ಅವುಗಳೆಲ್ಲದಕ್ಕೆ ಸವಾಲು ಎನ್ನುವಂತೆ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ನಾಗಿತ್ವಾಡಿ ಗ್ರಾಮದಲ್ಲಿ ವೈಫ್ ಯೋಜನೆ ಶುರುವಾಗಿದೆ.

Advertisement

ಜಿಲ್ಲಾ ಪರಿಷತ್‌ ಸಿಇಒ ಅಭಿನವ್‌ ಗೋಯಲ್‌ ಅವರ ಬಿಲ್ಡಿಂಗ್‌ ಆ್ಯಸ್‌ ಲರ್ನಿಂಗ್‌ ಏಡ್‌ (ಬಿಎಎಲ್‌ಎ) ಹಾಗೂ ವಿಭಾಗೀಯ ಆಯುಕ್ತರಾಗಿರುವ ಸುನಿಲ್‌ ಕೆಂದ್ರೇಕರ್‌ ಅವರು “ಸುಂದರ್‌ ಮಜಾ ಗಾಂವ್‌’ ಯೋಜನೆಯಲ್ಲಿ ಈ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.

ಇದರಿಂದಾಗಿ ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಮನೆಯಲ್ಲೇ ಇರುವ ಮಹಿಳೆಯರಿಗೆ ಹೆಚ್ಚಿನ ಉಪಯೋಗ ವಾಗಲಿದೆ ಎನ್ನಲಾಗಿದೆ.ಕೆಲವು ಅನಾವಶ್ಯಕ ಸೈಟ್‌ಗಳನ್ನು ಉಚಿತ ವೈಫೈನಲ್ಲಿ ಸಿಗದಿರುವಂತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್‌|ಭಾರತಕ್ಕೆ ಮತ್ತೊಂದು ಪದಕ|ಹೈ ಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್‌

ಗ್ರಾಮದಲ್ಲಿ 12 ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಭಕ್ತಿ ಗೀತೆಗಳು, ವಾರ್ತಾ ಮುಖ್ಯಾಂಶ ಮತ್ತು ಪ್ರಮುಖ ಮಾಹಿತಿಯನ್ನು ಹೇಳಲಾಗುವುದು. ಗ್ರಾಮದ ವಾರ್ಷಿಕ ಆದಾಯವನ್ನು 3 ಲಕ್ಷ ದಿಂದ 8-10 ಲಕ್ಷಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ 220 ಹುಣಸೆ ಗಿಡಗಳನ್ನು ನೆಡ ಲಾಗಿದೆ. ಅವುಗಳೊಂದಿಗೆ 101 ಮಹಿಳೆಯರು 101 ಆಲದ ಗಿಡಗಳನ್ನೂ ನೆಟ್ಟಿದ್ದಾರೆ. ಈ ಗ್ರಾಮಕ್ಕೆ 2006ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಸಿಕ್ಕಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next