Advertisement

ಕೋವಿಡ್ 19 ಲಾಕ್ ಡೌನ್: ಮಹಾರಾಷ್ಟ್ರದಲ್ಲಿ ಮೇ 15ರಿಂದ ಮನೆ, ಮನೆಗೆ ಮದ್ಯ ಸರಬರಾಜು

08:34 AM May 14, 2020 | Nagendra Trasi |

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್ 19 ವೈರಸ್ ತಡೆಗಟ್ಟಲು ಲಾಕ್ ಡೌನ್ ಮುಂದುವರಿದಿರುವ ನಡುವೆಯೇ ಮೇ 15ರಿಂದ ಮದ್ಯವನ್ನು ಮನೆಗೆ ಸರಬರಾಜು ಮಾಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

Advertisement

ಈ ಮೊದಲು ಮೇ 14ರಿಂದಲೇ ಆರಂಭಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಮದ್ಯ ಸರಬರಾಜು ಮಾಡುವ ವ್ಯಕ್ತಿಗಳ ಪರೀಕ್ಷೆ ಮತ್ತು ಗುರುತುಪತ್ರ ವಿತರಿಸುವ ನಿಟ್ಟಿನಲ್ಲಿ ಒಂದು ದಿನ ಮುಂದೂಡಿಕೆ ಮಾಡುವಂತೆ ಸ್ಥಳೀಯ ಅಧಿಕಾರಿಗಳು ವಿನಂತಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ಮದ್ಯದ ಅಂಗಡಿ ಮುಂದೆ ಸಾಲು, ಸಾಲು ಜನರು ಆಗಮಿಸುವುದಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಹೋಮ್ ಡೆಲಿವರಿಗೆ ಅನುಮತಿ ನೀಡಿದೆ. ಯಾವ ಜಿಲ್ಲೆಯ ಮದ್ಯದ ಅಂಗಡಿಗಳಿಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆಯೋ ಅಂತಹ ಪ್ರದೇಶಗಳಲ್ಲಿ ಮಾತ್ರ ಮದ್ಯ ಹೋಮ್ ಡೆಲಿವರಿಗೆ ಅನುಮತಿ ನೀಡಲಾಗಿದೆ ಎಂದು ವರದಿ ವಿವರಿಸಿದೆ.

ಮುಂಬೈ ಮತ್ತು ನಾಗ್ಪುರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮದ್ಯವನ್ನು ಮನೆ, ಮನೆಗೆ ಸರಬರಾಜು ಮಾಡಲಾಗುವುದು ಎಂದು ವರದಿ ತಿಳಿಸಿದೆ. ಹೋಮ್ ಡೆಲಿವರಿ ಕುರಿತಂತೆ ಕಠಿಣ ನಿಗಾ ವಹಿಸಲಾಗುವುದು ಎಂದು ಮಹಾರಾಷ್ಟ್ರ ಅಬಕಾರಿ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next