Advertisement

3 ಲಕ್ಷ ವೇತನದ ಆಫ‌ರ್‌; ವೈದ್ಯರ ಕೊರತೆ ನೀಗಿಸಲು “ಮಹಾ’ ತಂತ್ರ

11:30 AM Aug 06, 2018 | Team Udayavani |

ಮುಂಬೈ: ಕರ್ನಾಟಕದಂತೆಯೇ ನೆರೆಯ ಮಹಾರಾಷ್ಟ್ರದಲ್ಲೂ ವಿಶೇಷ ತಜ್ಞ ವೈದ್ಯರ ಕೊರತೆ ಕಾಡುತ್ತಿದ್ದು, ಇದಕ್ಕಾಗಿ ಮಾಸಿಕ 3
ಲಕ್ಷ ರೂ. ವೇತನ ಕೊಟ್ಟು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆರು ತಿಂಗಳ ಹಿಂದೆ ಈ ಆಫ‌ರ್‌ ನೀಡಿದ್ದ ಮಹಾರಾಷ್ಟ್ರ ಸರ್ಕಾರ ಈಗಾಗಲೇ 356 ತಜ್ಞ ವೈದ್ಯರ ನೇಮಕ ಮಾಡಿಕೊಂಡಿದೆ.

Advertisement

ಗ್ರಾಮಾಂತರ ಜಿಲ್ಲೆಗಳಾದ ಬೀಡ್‌, ರಾಯಗಡ, ಯವತ್ಮಾಳ್‌ ಮತ್ತು ಚಂದ್ರಾಪುರದಲ್ಲಿ 12 ಹೆರಿಗೆ ತಜ್ಞ ವೈದ್ಯರಿಗೆ ಮಾಸಿಕ 3 ಲಕ್ಷ ರೂ.
ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ಸದ್ಯ ಮಹಾ ಸರ್ಕಾರದ ಈ ತಂತ್ರ ಫ‌ಲಿಸುತ್ತಿದ್ದು, ಖಾಸಗಿ ವಲಯದಿಂದ ಹಲವಾರು ವೈದ್ಯರನ್ನು ಸೆಳೆದಿದೆ. ಇವರನ್ನು ನಕ್ಸಲ್‌ ಪೀಡಿತ ಮತ್ತು ಬುಡಕಟ್ಟು ಪ್ರದೇಶದಲ್ಲೂ ನಿಯೋಜಿಸಲಾಗಿದೆ. 

ಕರ್ನಾಟಕದಲ್ಲಿ ಬಿಡ್ಡಿಂಗ್‌
ಕರ್ನಾಟಕ ಸರ್ಕಾರ ಕಳೆದ ವರ್ಷ ಬಿಡ್ಡಿಂಗ್‌ ಮೂಲಕ ಗ್ರಾಮೀಣ ಪ್ರದೇಶಕ್ಕೆ ತಜ್ಞ ವೈದ್ಯರ ನೇಮಕ ಮಾಡಿಕೊಂಡಿತ್ತು.  ಅಂದರೆ 300 ಮಂದಿ ನೇಮಕವಾಗಿ, ಸದ್ಯ 202 ತಜ್ಞ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 

ನೇಮಕವಾದವರ ವಿವರ
142; ಹೆರಿಗೆ ತಜ್ಞರು
143; ಅರಿವಳಿಕೆ ತಜ್ಞರು
071; ಮಕ್ಕಳ ತಜ್ಞರು

ಮಹಾ ತಂತ್ರವೇನು?
1. ಮಾಸಿಕ ವೇತನ(ವೈದ್ಯರು ಚೌಕಾಸಿ ಮಾಡಿದಷ್ಟು)
2. ಪ್ರತಿ ಹೆರಿಗೆಗೆ 4 ಸಾವಿರ ರೂ. ಪ್ರೋತ್ಸಾಹ ಧನ
3. ಗರ್ಭಿಣಿಯರ ಚೆಕ್‌-ಅಪ್‌ಗೆ 40 ರೂ.
4.ಹೆರಿಗೆ ನಡೆಸುವಾಗ ಸಹಾಯ ಮಾಡಿದರೆ 1,500 ರೂ.
5. ಮಕ್ಕಳಿಗೆ ಚಿಕಿತ್ಸೆ ನೀಡಿದಲ್ಲಿ 1,200 ರೂ.

Advertisement
Advertisement

Udayavani is now on Telegram. Click here to join our channel and stay updated with the latest news.

Next