Advertisement
ಮಾಹಿತಿ ಪ್ರಕಾರ, ಸರಕಾರ ಈ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಇಂಧನ ಇಂಧನ ಇಲಾಖೆಯ ಅಧಿಕಾರಿಗಳಲ್ಲಿ ವರದಿ ನೀಡುವಂತೆ ಸಚಿವ ಡಾ.ನಿತಿನ್ ರಾವುತ್ ಅವರು ಆದೇಶಿಸಿದ್ದಾರೆ.
Related Articles
Advertisement
ಸರಕಾರದ ವತಿಯಿಂದ ರೈತರು ಮತ್ತು ಕೈಗಾರಿಕೆ ಕ್ಷೇತ್ರಗಳಿಗೆ ಸಬ್ಸಿಡಿ ವಿದ್ಯುತ್ ಒದಗಿಸಲಾಗುತ್ತಿದೆ. ಹಾಗೆಯೇ ಉತ್ಪಾದನಾ ವೆಚ್ಚದಲ್ಲಿ ಕಡಿತ ಮತ್ತು ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ವಸೂಲಿ ಮಾಡುವುದರಿಂದ ಇಂಧನ ಸಚಿವರ ಕನಸು ನನಸಾಗಿಸಬಹುದು.
ಮಹಾರಾಷ್ಟ್ರದಲ್ಲಿ ವಿದ್ಯುತ್ ಗ್ರಾಹಕರು ಸುಮಾರು 36,000 ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಪಾವತಿಸಲು ಬಾಕಿ ಉಳಿದಿದೆ. ಬಿಲ್ ಪಾವತಿಸದವರಲ್ಲಿ ರೈತರ ಸಂಖ್ಯೆ ಹೆಚ್ಚು. ಒಂದುವೇಳೆ ಈ ಬಿಲ್‌ಗಳನ್ನು ವಸೂಲಿ ಮಾಡಿದರೆ, ಸಾಮಾನ್ಯ ಜನರಿಗೆ, ರೈತರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ 100 ಯೂನಿಟ್‌ಗಳವರೆಗೆ ವಿದ್ಯುತ್ ಉಚಿತವಾಗಿ ನೀಡಬಹುದು ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಸರಕಾರದ ವತಿಯಿಂದ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದರಿಂದ ಸಾಮಾನ್ಯ ನಾಗರಿಕರಿಗೆ ಹೆಚ್ಚು ಸಾಕಷ್ಟು ಪರಿಹಾರ ಸಿಗಲಿದೆ. ಆದರೆ, 200 ಕ್ಕೂ ಹೆಚ್ಚು ಯೂನಿಟ್‌ಗಳನ್ನು ಬಳಸುವ ಗ್ರಾಹಕರಿಗೂ ಸಬ್ಸಿಡಿ ನೀಡುವಂತೆ ಬೇಡಿಕೆಗಳು ಮಾಡಲಾಗುತ್ತಿದೆ. 200 ಯೂನಿಟ್‌ಗಳವರೆಗೆ ಬಳಕೆ ಮಾಡುವ ಗ್ರಾಹಕರಿಗೂ ಸಬ್ಸಿಡಿ ನೀಡುವ ಪ್ರಸ್ತಾಪವನ್ನೂ ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೇಜ್ರಿವಾಲ್ ಸರಕಾರವು ದಿಲ್ಲಿಯ ಜನರಿಗೆ ದೊಡ್ಡ ಘೋಷಣೆ ಮಾಡಿದೆ. ಈಗ 200 ಯೂನಿಟ್‌ಗಳವರೆಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಯಾವುದೇ ಬಿಲ್ ಇರುವುದಿಲ್ಲ. 200ಕ್ಕಿಂತ ಒಂದು ಯೂನಿಟ್ ಅಂದರೆ 201 ಯೂನಿಟ್ ಬಳಕೆ ಮಾಡುವ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬೇಕು. ಹಾಗೆಯೇ 400 ಯೂನಿಟ್ ವಿದ್ಯುತ್ ಬಳಕೆಯ ಮೇಲೆ ಸಬ್ಸಿಡಿ ನೀಡಲಿದೆ ಎಂದು ಘೋಷಿಸಿದೆ. ಅದೇ ಮಾರ್ಗವನ್ನು ಮಹಾರಾಷ್ಟ್ರ ಸರಕಾರವು ಅನುಸರಿಸುತ್ತಿದೆ ಎನ್ನಲಾಗಿದೆ.