Advertisement

Maharashtra: 50% ಮೀಸಲು ಮಿತಿ ತೆಗೆಯಲು ಕೇಂದ್ರಕ್ಕೆ ವಿಪಕ್ಷ ನೆರವು: ಪವಾರ್‌

01:02 AM Aug 13, 2024 | Team Udayavani |

ಪುಣೆ: ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿಗದಿಪಡಿಸಿರುವ ಶೇ.50ರಷ್ಟು ಮೀಸಲಾತಿ ಮಿತಿಯನ್ನು ತೆಗೆಯಲು ಸರಕಾರ‌ ಕಾನೂನು ಜಾರಿ ಮಾಡಿದರೆ, ಅದನ್ನು ವಿಪಕ್ಷಗಳು ಬೆಂಬಲಿಸಲಿವೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

Advertisement

ರಾಜ್ಯಮಟ್ಟದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ಕರೆಯುವಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಪವಾರ್‌ ಮನವಿ ಮಾಡಿದ್ದರು. ಸೋಮವಾರ ಮರಾಠ ಮೀಸಲು ಹೋರಾಟ ಗಾರರು ಪವಾರ್‌ ಅವರನ್ನು ಭೇಟಿ ಮಾಡಿದ್ದು, ಮರಾಠ ಸಮುದಾಯದ ಹೋರಾಟದ ಜತೆ ನಿಲ್ಲಬೇಕು ಎಂದು ಮನವಿ ಮಾಡಿದ್ದರು. ಇದಾದ ಬಳಿಕ ಪವಾರ್‌ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next