Advertisement
ಮುಖ್ಯಮಂತ್ರಿ ಮಾಝಿ ಲಡಕಿ ಬಹಿನ್ ಯೋಜನೆಯಡಿ 21-60 ವಯೋಮಾನದ ಅರ್ಹ ಮಹಿಳೆಯರಿಗೆ ತಿಂಗಳಿಗೆ 1,500 ರೂ. ಹಾಗೂ 5 ಸದಸ್ಯರಿರುವ ಕುಟುಂಬಕ್ಕೆ ವಾರ್ಷಿಕ 3 ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಬಜೆಟ್ ಮಂಡಿಸಿದ ಡಿಸಿಎಂ ಅಜಿತ್ ಪವಾರ್ ಘೋಷಿಸಿದ್ದಾರೆ. ಮಹಿಳೆಯರಿಗೆ ನೆರವು ಯೋಜನೆ ಜುಲೈಯಿಂದ ಆರಂಭವಾಗಲಿದ್ದು, 46,000 ಕೋಟಿ ರೂ. ಮೀಸಲಿಡಲಾಗಿದೆ. ವಿಧಾನಸಭೆ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿಯಿರುವಂತೆಯೇ ಈ ಎಲ್ಲ ಘೋಷಣೆಗಳು ಹೊರಬಿದ್ದಿವೆ.
ಇಂಧನದ ಮೇಲಿನ ತೆರಿಗೆ ಕಡಿತ ಗೊಳಿಸಿರುವುದಾಗಿಯೂ ಡಿಸಿಎಂ ಅಜಿತ್ ಪವಾರ್ ಘೋಷಿಸಿದ್ದಾರೆ. ಮುಂಬಯಿ, ನವಿ ಮುಂಬಯಿ ಥಾಣೆಗೆ ಮಾತ್ರ ಯೋಜನೆ ಅನ್ವಯಿಸಲಿದ್ದು, ಜು.1ರಿಂದ ಜಾರಿಯಾಗಲಿದೆ. ಲೀ. ಪೆಟ್ರೊಲ್‌ಗೆ 65 ಪೈಸೆ, ಲೀ. ಡೀಸೆಲ್‌ಗೆ 2.60ರೂ. ಇಳಿಕೆಯಾಗಲಿದೆ.