ನಾಗಪುರ: ಇಂದಿನಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವಾದ ಇಂದು ಮಹಾರಾಷ್ಟ್ರದ ನಾಗ್ಪುರದ ಎನ್ ಸಿಪಿ ಶಾಸಕಿಯೊಬ್ಬರು ಅಧಿವೇಶನದಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ದೇವಲಾಲಿ ವಿಧಾನಸಭಾ ಕ್ಷೇತ್ರದ ಎನ್ ಸಿಪಿ ಶಾಸಕಿ ಸರೋಜ್ ಅಹಿರೆ ಅವರು ತಮ್ಮ ಎರಡೂವರೆ ತಿಂಗಳ ಮಗುವಿನೊಂದಿಗೆ ಅಧಿವೇಶನಕ್ಕೆ ಆಗಮಿಸಿ ಎಲ್ಲರ ಮನ ಗೆದ್ದಿದ್ದಾರೆ.
ಮಗುವಿಗೆ ದಪ್ಪ ಹೊದಿಕೆಯನ್ನು ಹೊದ್ದು ಮಡಿಲಲ್ಲಿ ಹಿಡಿದುಕೊಂಡು ಬಂದಿದ್ದ ಶಾಸಕಿ ಎರಡು ವರ್ಷಗಳ ನಂತರ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಅದಕ್ಕೆ ಹಾಜರಾಗಲು ಬಯಸಿರುವುದಾಗಿ ಶ್ರೀಮತಿ ಅಹಿರೆ ಹೇಳಿದ್ದಾರೆ.
“ನಾನು ತಾಯಿಯಾಗಿರುವ ಜೊತೆಗೆ ಜನಪ್ರತಿನಿಧಿ… ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ನಾಗ್ಪುರದಲ್ಲಿ ಯಾವುದೇ ವಿಧಾನಸಭಾ ಅಧಿವೇಶನ ನಡೆದಿಲ್ಲ, ನನ್ನ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ನನ್ನ ಮೇಲಿದೆ ಹಾಗಾಗಿ ವಿಧಾನಸಭಾ ಅಧಿವೇಶನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 11,12 ರಂದು ಉಡುಪಿಯಲ್ಲಿ ಯಕ್ಷ ಸಾಹಿತ್ಯ ಸಮ್ಮೇಳನ ; ನಿಮ್ಮ ಮುಖಕ್ಕೆ ಬಣ್ಣ ಬೇಕೆ ?