Advertisement

ಆಧಾರ್‌ ಪತ್ನಿಯದ್ದು; ಎಂಟ್ರಿ ಮಾತ್ರ ಗರ್ಲ್ ಫ್ರೆಂಡ್‌ ಜೊತೆಗೆ!

08:58 PM Feb 04, 2022 | Team Udayavani |

ಪುಣೆ: ಪತ್ನಿಯ ಆಧಾರ್‌ ಬಳಸಿಕೊಂಡು ಗರ್ಲ್ ಫ್ರೆಂಡ್‌ ಜೊತೆಗೆ ಹೋಟೆಲ್‌ಗೆ ಪ್ರವೇಶ ಪಡೆದಿದ್ದ 41 ವರ್ಷದ ವ್ಯಕ್ತಿಯ ವಿರುದ್ಧ ಪುಣೆಯಲ್ಲಿ ಕೇಸು ದಾಖಲಿಸಲಾಗಿದೆ.

Advertisement

ಗುಜರಾತ್‌ ಮೂಲದ ಉದ್ಯಮಿಯೇ ಈ ಕಳ್ಳಾಟ ಆಡಿದವರು. ಅವರ ಪತ್ನಿಯು ಕಂಪನಿಯ ನಿರ್ದೇಶಕ ಸ್ಥಾನದಲ್ಲಿದ್ದಾರೆ.

ಪತಿಯ ಮೇಲೆ ಅನುಮಾನವಿದ್ದ ಕಾರಣ ಪತ್ನಿಯು, ಪತಿಯ ಕಾರಿನಲ್ಲಿ ಜಿಪಿಎಸ್‌ ಅಳವಡಿಸಿದ್ದರು.

ಇದನ್ನೂ ಓದಿ:ವಂಡರ್‌ ಬುಕ್‌ ಆಫ್ ರೆಕಾರ್ಡ್ಸ್ ಗಾಗಿ 30 ನಿಮಿಷ ಮಂಜುಗಡ್ಡೆ ನೀರಲ್ಲಿ ಕುಳಿತರು!

ಕಳೆದ ನವೆಂಬರ್‌ನಲ್ಲಿ ಪತಿಯು ತಾನು ಬ್ಯುಸಿನೆಸ್‌ಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಹೋಗುವ ಬಗ್ಗೆ ತಿಳಿಸಿದ್ದರು. ಲೊಕೇಶನ್‌ ಪರೀಕ್ಷಿಸಿದಾಗ, ಕಾರು ಪುಣೆಯಲ್ಲಿರುವುದು ಪತ್ನಿಗೆ ಗೊತ್ತಾಯಿತು. ಅದರ ಜಾಡು ಹಿಡಿದು, ಹೋಟೆಲ್‌ ಅನ್ನು ಸಂಪರ್ಕಿಸಿದಾಗ ಅಲ್ಲಿನ ಸಿಬ್ಬಂದಿಯು, “ಆ ವ್ಯಕ್ತಿಯು ತಮ್ಮ ಪತ್ನಿಯೊಂದಿಗೆ ಚೆಕ್‌-ಇನ್‌ ಆಗಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next