ಮಹಾರಾಷ್ಟ್ರ: ಗಂಡ ಹೆಂಡತಿಯ ನಡುವೆ ಅದೇನೋ ವಿಚಾರಕ್ಕೆ ಜಗಳವಾಗಿ ಹೆಂಡತಿ ಮನೆಬಿಟ್ಟು ಹೋದ ಬೇಸರದಲ್ಲಿ ಪತ್ನಿಯ ಧ್ವನಿ ಕೇಳಬೇಕೆಂದು ಗಂಡ ತನ್ನ ಪತ್ನಿಗೆ ಕರೆ ಮಾಡಿದ ಕೆಲವೇ ನಿಮಿಷದಲ್ಲಿ ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಡೊಂಬಿವಲಿಯಲ್ಲಿ ನಡೆದಿದೆ.
ಏನಿದು ಘಟನೆ:
ಮಹಾರಾಷ್ಟ್ರದ ಡೊಂಬಿವಲಿ ನಿವಾಸಿಯಾಗಿರುವ ಸುಧಾಕರ್ ಯಾದವ್ ಅವರ ಪತ್ನಿ ಸಂಜನಾ ಯಾದವ್ ಜೊತೆ ಡಿಸೆಂಬರ್ 19 ರಂದು ಸಣ್ಣ ಜಗಳವಾಡಿಕೊಂಡಿದ್ದಾರೆ ಇದರಿಂದ ಮನನೊಂದ ಪತ್ನಿ ಮನೆ ಬಿಟ್ಟು ದಿವಾದಲ್ಲಿರುವ ತನ್ನ ಸಹೋದರಿಯ ಮನೆಗೆ ತೆರಳಿದ್ದಾರೆ.
ಘಟನೆಯ ಮರುದಿನ ಬೆಳಿಗ್ಗೆ 10 ಗಂಟೆಯ ಸುಮಾರಿಗೆ, ಮುಂಬೈನ ಕುರ್ಲಾದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂಜನಾಗೆ ಸುಧಾಕರ್ ಕರೆ ಮಾಡಿ ಎರಡು ನಿಮಿಷಗಳ ಕಾಲ ನಿನ್ನ ಧ್ವನಿಯನ್ನು ಕೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಕರೆ ಕಟ್ ಮಾಡಿದ ಪತಿ ಕೆಲವೇ ನಿಮಿಷದಲ್ಲಿ ಪತ್ನಿಯ ವಾಟ್ಸ್ ಆಪ್ ನಂಬರ್ ಗೆ ಪತಿ ನೇಣು ಬಿಗಿಯಲು ತಯಾರಿ ನಡೆಸಿರುವ ಫೋಟೋ ಕಳುಹಿಸಿದ್ದಾರೆ ಇದರಿಂದ ಗಾಬರಿಗೊಂಡ ಪತ್ನಿ ನೆರೆಮನೆಯವರಿಗೆ ಕರೆ ಮಾಡಿ ಪರಿಶೀಲನೆ ನಡೆಸುವಂತೆ ಹೇಳಿದ್ದಾಳೆ ಅದರಂತೆ ನೆರೆಮನೆಯವರು ಮನೆಯ ಬಳಿ ಬಂದು ಬಾಗಿಲು ಬಡಿದಾಗ ಮಹಿಳೆಯ ಪತಿ ಬಾಗಿಲು ತೆರೆಯದೇ ಇದ್ದಾಗ ಮನೆಯ ಕಿಟಕಿಯ ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ನೇಣುಬಿಗಿದಿರುವುದು ಗೊತ್ತಾಗಿದೆ ಕೂಡಲೇ ಬಾಗಿಲು ಒಡೆದು ಒಳ ಹೋದ ನೆರೆಮನೆಯವರು ವ್ಯಕ್ತಿಯನ್ನು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಡೊಂಬಿವಿಲಿಯ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: RSS; ಜಾತಿ ಗಣತಿಗೆ ವಿರೋಧವಿಲ್ಲ, ಆದರೆ….: ಸ್ಪಷ್ಟನೆ ನೀಡಿದ ಆರ್‌ಎಸ್‌ಎಸ್