Advertisement

ಮಹಾರಾಷ್ಟ್ರ ಕೊಂಕಣ್‌ ಅಸೋಸಿಯೇಶನ್‌: ಸಮ್ಮಾನ

04:11 PM Apr 10, 2018 | |

ಮುಂಬಯಿ: ಮಹಾರಾಷ್ಟ್ರ ಕೊಂಕಣ್‌ ಅಸೋಸಿಯೇಶನ್‌ ವತಿಯಿಂದ ಈಸ್ಟರ್‌ ಸಂಡೇ ಸಂಭ್ರಮ ಎ. 1ರಂದು ರಾತ್ರಿ ಅಂಧೇರಿ ಪೂರ್ವದ ಮರೋಲ್‌ ವಿಜಯನಗರದ ವಿನ್ಸೆಂಟ್‌ ಡಿ’ಪಲೋಟ್ಟಿ ಚರ್ಚ್‌ನ ಲಾನ್‌ನಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ಅಸೋಸಿಯೇಶನ್‌ ಉಪಾಧ್ಯಕ್ಷ ವಾಲ್ಟರ್‌ ಡಿ’ಸೋಜಾ ಕಲ್ಮಾಡಿ ಹಾಗೂ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದು, ತವರೂರಿನಲ್ಲಿ ನೆಲೆಸಲಿರುವ  ಜಾನ್‌ ವೇಗಸ್‌  ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಬಾಲ ಪ್ರತಿಭೆ ಕು| ಲವಿನಾ ಡಿ’ಸೋಜಾ ಇವರನ್ನು ಅಭಿನಂದಿಸಲಾಯಿತು. 

ಉದ್ಯಮಿ ರೋನಿ ಗೋವಿಯಸ್‌ ಸಾರಥ್ಯದಲ್ಲಿ ಗೋವಿಯಸ್‌ ಪರಿವಾರ ಸದಸ್ಯರಿಂದ ಉಪನಗರ ಕಲ್ಯಾಣ್‌ನ  ಮುರ್ಬಾಡ್‌ಗಾಂವ್‌ನಲ್ಲಿ ಸ್ಥಾಪಿಸಲುದ್ದೇಶಿತ ವೃದ್ಧಾಶ್ರಮದ ಮಾತೃಸಂಸ್ಥೆ ಲಿಲ್ಲಿ ಗೋವಿಯಸ್‌ ಚಾರಿಟೇಬಲ್‌ ಟ್ರಸ್ಟನ್ನು ಅತಿಥಿಗಳು ಸೇವಾರ್ಪಣೆಗೊಳಿಸಿ ಶುಭಹಾರೈಸಿದರು.

ಸಮಾರಂಭದ ವೇದಿಕೆಯಲ್ಲಿ ಹೆರಾಲ್ಡ್‌ ಗೋವಿಯಸ್‌, ಹ್ಯೂಬರ್ಟ್‌ ಗೋವಿಯಸ್‌, ಎಚ್‌.ಎ. ಗೋವಿಯಸ್‌, ಲೋರಾ ಗೋವಿಯಸ್‌, ವಿನ್ಸೆಂಟ್‌ ಡಿ’ಪಲೋಟ್ಟಿ ಚರ್ಚ್‌ನ  ಪ್ರಧಾನ ಧರ್ಮಗುರು ರೆ|ಫಾ| ಚಾರ್ಲ್ಸ್‌ ಫೆರ್ನಾಂಡಿಸ್‌, ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಅಧ್ಯಕ್ಷ ಜೋನ್‌ ಡಿ’ಸಿಲ್ವ, ದಿವೋ ಸಾಪ್ತಾಹಿಕದ ಸಂಪಾದಕ ಲಾರೆನ್ಸ್‌ ಕುವೆಲ್ಲೊ, ಚಲನಚಿತ್ರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್‌ ಬಾಕೂìರು, ಉದ್ಯಮಿಗಳಾದ ರೋನಿ ಗೋವಿಯಸ್‌, ಡೆನಿಸ್‌ ಲೋಬೊ, ಜಾನ್‌ ರೆಬೆಲ್ಲೋ ಸಯಾನ್‌, ಓಜ್ವಲ್ಡ್‌ ಕೊರ್ಡೆರೊ ಹಾಗೂ ಅಸೋಸಿಯೇಶನ್‌ನ ಅಧ್ಯಕ್ಷೆ ಬೆನೆಡಿಕ್ಟಾ ಬಿ. ರೆಬೆಲ್ಲೊ, ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಗ್ರೆಗರಿ ಮೊನಿಸ್‌, ಜೊತೆ ಕಾರ್ಯದರ್ಶಿ ಪ್ರಿತೇಶ್‌ ಕ್ಯಾಸ್ತಲಿನೊ,  ಜತೆ ಕೋಶಾಧಿಕಾರಿ ಐಡಾ ಲೋಬೊ ಮತ್ತು ಪೂರ್ವ ವಲಯಾಧ್ಯಕ್ಷ ವಿನ್ಸೆಂಟ್‌ ಕ್ಯಾಸ್ತಲಿನೊ, ಮಾಜಿ ಗೌರವ ಕಾರ್ಯದರ್ಶಿ ಸಿರಿಲ್‌ ಕ್ಯಾಸ್ತಲಿನೊ, ರೋಕಿ ಡಿ’ಕುನ್ಹಾ, ಸ್ಟೇನಿ ಡಾಯಸ್‌, ಗ್ರೆಗರಿ ನಿಡ್ಡೋಡಿ ಉಪಸ್ಥಿತರಿದ್ದರು.

ಅಸೋಸಿಯೇಶನ್‌ನ ಸಂಸ್ಥಾಪಕಾಧ್ಯಕ್ಷ ಲಿಯೋ ಫೆರ್ನಾಂಡಿಸ್‌ ಜೆರಿಮೆರಿ ಸ್ವಾಗತಿಸಿದರು.  ಸುಜಾØನ್‌ ಎಲ್‌.ಕುವೆಲ್ಲೊ, ಫ್ಲೋರಾ ಡಿ’ಸೋಜಾ ಕಲ್ಮಾಡಿ ಸಮ್ಮಾನ ಪತ್ರ ವಾಚಿಸಿದರು. ಸ್ಟೀವನ್‌ ಲೋಬೊ ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು.

Advertisement

ಜೆರಿ ಡಿ’ಸೋಜಾ, ಆ್ಯಂಟನಿ ತಾವ್ರೊ, ಜೆರಿ ಬೊಂದೆಲ್‌, ಮಾ| ಜೊಯ್‌ಸ್ಟನ್‌, ಕು| ಜೂಡಿ ಜೆರಿಮೆರಿ, ಮಾನ್ಯುಲ್‌ ಫೆರ್ನಾಂಡಿಸ್‌, ಶಾಲೆಟ್‌ ಕ್ಯಾಸ್ತಲಿನೊ, ವಿರಾನ್‌ ವೇಗಸ್‌, ಕು| ರೋಶ್ನಿ ಕ್ರಾಸ್ತಾ, ಕು| ಬೆಲ್ಲಿಟಾ, ಆವಿನ್‌ ಡಿ’ಕೋಸ್ತಾ, ಮಾ| ಲೆವಿನ್‌ ಲಿಯೋ ಫೆರ್ನಾಂಡಿಸ್‌, ಮೊದಲಾದವರು ಸಹಕರಿಸಿದರು. ಫ್ಲೋಯ್ಡ ಡಿ’ಮೆಲ್ಲೊ ಕಾಸ್ಸಿಯಾ ನಿರ್ವಹಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next