ಮುಂಬೈ : ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಚಿವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ಗೃಹ ಸಚಿವರಿಗೆ ಮೂರು ನಾಲ್ಕು ಬೆದರಿಕೆ ಕರೆಗಳು ಬಂದಿರುವ ಮಾಹಿತಿ ಇದ್ದು ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಹಿಮಾಚಲ ಪ್ರದೇಶದಿಂದ ಬೆದರಿಕೆ ಕರೆಗಳು ಬಂದಿದ್ದು ಅದಲ್ಲದೆ ಈ ಹಿಂದೆ ಬೇರೆ ಬೇರೆ ಕಡೆಗಳಿಂದಲೂ ಕರೆಗಳು ಬಂದಿವೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಕೆಲವೊಂದು ಫೋನ್ ಸಂಭಾಷಣೆಯಲ್ಲಿ ಕಂಗನಾ ಪರವಾದ ವಿಚಾರಗಳ ಮಾತನಾಡಿದ್ದು ಆದುದರಿಂದ ಕಂಗನಾ ಬೆಂಬಲಿಗರೇ ಬೆದರಿಕೆ ಕರೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಂಗನಾ ಸಿನಿಮಾ ಮಾಫಿಯಾಗಿಂತಲೂ ಮುಂಬೈ ಪೊಲೀಸರನ್ನು ಕಂಡರೆ ಭಯಪಡುವಂತಾಗಿದೆ ಎಂದು ಟ್ವೀಟ್ ಮಾಡಿದ್ದರು, ಈ ಟ್ವೀಟ್ ಗೆ ಪ್ರತಿಕ್ರೀಯಿಸಿದ ಗೃಹ ಸಚಿವರು ಮುಂಬೈ ಪೊಲೀಸರು ಸುರಕ್ಷಿತವಲ್ಲ ಎಂದು ಹೇಳಿದವರು ಮಹಾರಾಷ್ಟ್ರದಲ್ಲಿ ಇರಲು ಸೂಕ್ತವಲ್ಲ ಎಂದು ಕಂಗನಾ ಹೇಳಿಕೆ ವಿರುದ್ಧ ಗುಡುಗಿದ್ದಾರೆ.
ಈ ವಿಚಾರವಾಗಿಯೇ ಗೃಹ ಸಚಿವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದೂ ಹೇಳಲಾಗುತ್ತಿವೆ.