Advertisement
5ನೇ ಸ್ಥಾನದಲ್ಲಿದೆ ದ.ಆಫ್ರಿಕಾ: ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶವೆಂದರೆ ಅಮೆರಿಕ. ಬ್ರೆಜಿಲ್ ಎರಡನೇ ಸ್ಥಾನ, ಭಾರತ 3ನೇ, ರಷ್ಯಾ 4ನೇ, ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ.
Related Articles
Advertisement
ಯುವಕರಲ್ಲೂ ಸೋಂಕು ಅಧಿಕ: “ವಿಶ್ವದಲ್ಲಿ ಯುವಕ ರಿಗೆ ಕೊರೊನಾ ಸೋಂಕು ತಗುಲುತ್ತಿರುವುದು ಹೆಚ್ಚಾಗು ತ್ತಿದ್ದು, 20, 30 ಹಾಗೂ 40 ವರ್ಷ ವಯಸ್ಸಿನ ವರೂ ಈ ಸೋಂಕಿನಿಂದ ಬಳಲಿರುವ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕಳವಳ ವ್ಯಕ್ತಪಡಿಸಿದೆ. ಡಬ್ಲೂéಎಚ್‌ಒನ ವೆಸ್ಟರ್ನ್ ಪೆಸಿಫಿಕ್ ವಿಭಾಗದ ಮುಖ್ಯಸ್ಥರಾದ ಟಕೇಶಿ ಕಸಯ್ ಅವರು ಮಾತನಾಡಿ, ಕೊರೊನಾ ಸೋಂಕಿನ ಲಕ್ಷಣಗಳು ದಿನಗಳೆದಂತೆ ಬದಲಾ ಗುತ್ತಿದೆ. ಈ ಮೊದಲು, ಕೊರೊನಾ ಸೋಂಕು ಮಕ್ಕಳು, ಹಿರಿಯ ನಾಗರಿಕರಲ್ಲಿ ಬೇಗನೇ ಕಾಣಿಸಿಕೊಳ್ಳುತ್ತದೆ ಎಂದು ತಿಳಿಯಲಾಗಿತ್ತು. ಆದರೀಗ, ಯುವಕರೂ ಈಗ ಅಪಾಯದ ಪರಿಧಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೋಂಕು ಇಳಿಮುಖಆ.13ರಿಂದೀಚೆಗೆ ದೈನಂದಿನ ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಕರಣಗಳು ಇಳಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ. ಆದರೆ, ಇಳಿಮುಖವಾಗುತ್ತಿರುವುದನ್ನು ನೋಡಿ ನಿರ್ಲಕ್ಷ್ಯ ವಹಿಸಿದರೆ ಖಂಡಿತಾ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆಯನ್ನೂ ರವಾನಿಸಿದೆ. ಆ.13ಕ್ಕೆ 64 ಸಾವಿರದಷ್ಟಿದ್ದ ದೈನಂದಿನ ಪ್ರಕರಣಗಳ ಸಂಖ್ಯೆ ಈಗ 55 ಸಾವಿರಕ್ಕಿಳಿದಿದೆ. ಈ ಅವಧಿಯಲ್ಲಿ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಂತ, 5 ದಿನಗಳ ಲೆಕ್ಕಾಚಾರವನ್ನು ನೋಡಿದರೆ ಸಾಲುವುದಿಲ್ಲ. ಯಾವುದೇ ನಿರ್ಲಕ್ಷ್ಯ ವಹಿಸಿದೇ, ಸೋಂಕಿಗೆ ಕಡಿವಾಣ ಹಾಕುವ ಕ್ರಮಗಳನ್ನು, ಪರೀಕ್ಷೆಯನ್ನು ಮುಂದುವರಿಸಲೇಬೇಕು ಎಂದು ಸಚಿವಾಲಯ ಹೇಳಿದೆ. ಗುಣಮುಖ: ಹೊಸ ದಾಖಲೆ
ಕೇವಲ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 57,937 ಸೋಂಕಿತರು ಗುಣಮುಖರಾಗಿದ್ದು, ವಾಸಿ ಯಾದವರ ಸಂಖ್ಯೆ 19.77 ಲಕ್ಷ ದಾಟಿದೆ. ಅಲ್ಲದೆ, ಕೋವಿಡ್ ಗುಣಮುಖ ಪ್ರಮಾಣ ದೇಶದಲ್ಲಿ ಶೇ.73.18ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ 3.09 ಕೋಟಿ ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದ್ದು, ಮಂಗಳವಾರ ಒಂದೇ ದಿನ ದಾಖಲೆಯ 8.99 ಲಕ್ಷ ಸ್ಯಾಂಪಲ್‌ಗಳ ಪರೀಕ್ಷೆ ನಡೆದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ ದೇಶದಲ್ಲಿ 55,079 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 876 ಮಂದಿ ಸಾವಿಗೀಡಾಗಿದ್ದಾರೆ. ದೇಶದ ಮರಣ ಪ್ರಮಾಣವು ಶೇ.1.92ಕ್ಕಿಳಿಕೆಯಾಗಿದೆ ಎಂದೂ ಆರೋಗ್ಯ ಸಚಿವಾಲಯ ಹೇಳಿದೆ.