Advertisement
288 ಸದಸ್ಯ ಬಲದ ಅಸೆಂಬ್ಲಿ ಚುನಾವಣೆಗೆ ಒಟ್ಟು 10,900 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 7,078 ಸಿಂಧುವಾಗಿದ್ದವು. 2,938 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿರುವ ಕಾರಣ, ಈಗ 4140 ಅಭ್ಯರ್ಥಿಗಳು ರಣಾಂಗಣದಲ್ಲಿ ಉಳಿದಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ಪ್ರಮಾಣ ಶೇ.28ರಷ್ಟು ಹೆಚ್ಚಳ(901)ವಾಗಿದ್ದು, ಕಳೆದ ಬಾರಿ 3239 ಮಂದಿ ಕಣದಲ್ಲಿದ್ದರು.
Related Articles
ಕೊಲ್ಹಾಪುರ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಧುರಿಮಾ ರಾಜೇ ಛತ್ರಪತಿ ಅವರು ಏಕಾಏಕಿ ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದು ಕಾಂಗ್ರೆಸ್ಗೆ ತೀವ್ರ ಆಘಾತ ಉಂಟುಮಾಡಿದೆ. ಈಗ ಕಾಂಗ್ರೆಸ್ಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಯೇ ಇಲ್ಲದಂತಾಗಿದೆ.
Advertisement
ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ?ನಂದೂರ್ಬಾರ್ನ ಶಹದಾ ಕ್ಷೇತ್ರದಲ್ಲಿ ಈಗ ಅತಿ ಕಡಿಮೆ ಅಂದರೆ ಕೇವಲ 3 ಅಭ್ಯರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ. ಬೀಡ್ ಜಿಲ್ಲೆಯ ಮಜಲ್ಗಾಂವ್ನಲ್ಲಿ ಅತಿ ಹೆಚ್ಚು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಂಬೈನ 36 ಕ್ಷೇತ್ರಗಳಲ್ಲಿ 420 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪುಣೆಯ 21 ಕ್ಷೇತ್ರಗಳಲ್ಲಿ 303 ಮಂದಿ ಕಣಕ್ಕಿಳಿದಿದ್ದಾರೆ.