Advertisement
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಆದಿಶಕ್ತಿ ಕನ್ನಡ ಸಂಘ ಮತ್ತು ರಾತ್ರಿ ಶಾಲೆಗಳ ಅಧ್ಯಕ್ಷರಾದ ಭಾಸ್ಕರ್ ಎಂ. ಶೆಟ್ಟಿ ಅವರು ಮಾತನಾಡಿ, ಮಹಾರಾಷ್ಟÅದ ಏಳ್ಗೆಗಾಗಿ ಹುತಾತ್ಮರಾದ ಛತ್ರಪತಿ ಶಿವಾಜಿ ಮಹಾರಾಜ್, ಗೋಪಾಲ್‌ಕೃಷ್ಣ ಗೋಖಲೆ ಹಾಗೂ ಲೋಕಮಾನ್ಯ ತಿಲಕರಂತಹ ಮಹಾನೀಯ ರನ್ನು ಸ್ಮರಿಸಿದರು. ಈ ನಾಡು ನುಡಿಯ ಕುರಿತು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಅಭಿಮಾನವನ್ನು ಬೆಳೆಸಬೇಕು. ನಮ್ಮೆಲ್ಲರ ಕರ್ಮ ಭೂಮಿಯಾದ ಮಹಾರಾಷ್ಟ್ರವನ್ನು ನಾವು ಎಂದೂ ಮರೆಯಬಾರದು. ಈ ಮಣ್ಣಿನ ಋಣವನ್ನು ತೀರಿಸಲು ನಾವು ಯಾವಾಗಲೂ ಸಿದ್ಧರಾಗಿರಬೇಕು. ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನದ ಮಹತ್ವವನ್ನು ಹೇಳಿ ಮಹಾ ರಾಷ್ಟ್ರ ದಿನದ ಬಗ್ಗೆ ಎಲ್ಲರಿಗೂ ಶುಭ ಹಾರೈಸಿದರು.
ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕರ ದಿನಾಚರಣೆಯ ಕುರಿತು
ಶಾಲಾ ವಿದ್ಯಾರ್ಥಿಗಳಾದ ರಾಜು ಬಜಂತ್ರಿ ಮತ್ತು ರಾಹುಲ್ ರಾಠೊಡ್ ಮಾತನಾಡಿದರು. ಶಿಲ್ಪಾ ಹತ್ತರಕಿ ಹಾಗೂ ರಾಹುಲ್ ರಾಠೊಡ್ ಮಹಾರಾಷ್ಟ್ರ ಗೀತೆಯನ್ನು ಹಾಡಿದರು. ಮಾಧ್ಯಮಿಕ ವಿಭಾಗದ ಶಾಲಾ ಶಿಕ್ಷಕ ವೆಂಕಟರಮಣ ಶೆಣೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕ ಸಂತೋಷ್ ದೊಡ್ಡಮನಿ ಅವರು ವಂದಿಸಿದರು. ವಿದ್ಯಾರ್ಥಿ ಗಳಿಗೆ ಸಿಹಿ-ತಿಂಡಿಯನ್ನು ವಿತರಿಸಲಾಯಿತು. ಶ್ರೀ ಆದಿಶಕ್ತಿ ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು ವಿದ್ಯಾರ್ಥಿಗಳಿಗೆ ಪಾಲಕ- ಪೋಷಕರು, ಶಿಕ್ಷಕವೃಂದದವರು, ಶಿಕ್ಷಕೇತರ ಸಿಬಂದಿ ಅಧಿಕ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು.