Advertisement

ದೇಶಾದ್ಯಂತ ಒಂದೇ ದಿನ 3,970 ಮಂದಿಗೆ ಸೋಂಕು

03:05 AM May 17, 2020 | Hari Prasad |

ನವದೆಹಲಿ: ಒಂದೇ ದಿನದಲ್ಲಿ ದೇಶಾದ್ಯಂತ ಸುಮಾರು 4 ಸಾವಿರ ಮಂದಿಗೆ ಸೋಂಕು ತಗಲಿದೆ.

Advertisement

ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ ದೇಶಾದ್ಯಂತ 3,970 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿಗೆ 103 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಅಲ್ಲದೆ, ಈ ವರೆಗೆ ಶೇ. 35.08ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಮೃತಪಟ್ಟ 103 ಮಂದಿಯ ಪೈಕಿ ಅತಿ ಹೆಚ್ಚು ಅಂದರೆ 49 ಮಂದಿ ಮಹಾರಾಷ್ಟ್ರದವರು ಮತ್ತು 20 ಮಂದಿ ಗುಜರಾತ್‌ ನವರು ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರಲ್ಲಿ ಶೇ.70ಕ್ಕೂ ಹೆಚ್ಚು ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಐವರು ಯೋಧರಿಗೆ ಪಾಸಿಟಿವ್‌: ಶನಿವಾರ ದೆಹಲಿಯಲ್ಲಿ ಐವರು ಸಿಆರ್‌ಪಿಎಫ್ ಯೋಧರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸಿಆರ್‌ಪಿಎಫ್ ನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 285ಕ್ಕೇರಿದೆ.

ಭಾರತಕ್ಕೆ 200 ವೆಂಟಿಲೇಟರ್‌ ಪೂರೈಕೆ: ಟ್ರಂಪ್‌ ಘೋಷಣೆ
ಕೋವಿಡ್ ವಿರುದ್ಧ ಹೋರಾಡಲು ಅಮೆರಿಕ 200 ಸಂಚಾರಿ ವೆಂಟಿಲೇಟರ್‌ಗಳನ್ನು ಭಾರತಕ್ಕೆ ಕಳುಹಿಸಿಕೊಡಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದೇ ವೇಳೆ, ಕೋವಿಡ್ ಗೆ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತೀಯ ಮೂಲದ ಅಮೆರಿಕ ಸಂಶೋಧಕರ ಯತ್ನವನ್ನು ಶ್ಲಾಘಿಸಿದ್ದಾರೆ.

Advertisement

ಅಂದಹಾಗೆ, ಅಮೆರಿಕ ಕಳುಹಿಸಲಿರುವ ಪ್ರತಿ ವೆಂಟಿಲೇಟರ್‌ನ ಬೆಲೆ ಸುಮಾರು 9.6 ಲಕ್ಷ ರೂ. ಗಳಾಗಲಿದೆ (13,000 ಡಾಲರ್‌). ಈ ತಿಂಗಳ ಅಂತ್ಯ ಅಥವಾ ಜೂನ್‌ ಮೊದಲ ವಾರದಲ್ಲಿ ಇವು ಭಾರತವನ್ನು ತಲುಪಲಿವೆ. ಇವುಗಳ ಒಟ್ಟು ವೆಚ್ಚ, ಸಾರಿಗೆ ವೆಚ್ಚ ಹೊರತುಪಡಿಸಿ 19.20 ಕೋಟಿ ರೂ. ಗಳಾಗಲಿದೆ (2.6ಮಿಲಿಯನ್‌ ಡಾಲರ್‌).

Advertisement

Udayavani is now on Telegram. Click here to join our channel and stay updated with the latest news.

Next