Advertisement

ಅಮೆರಿಕ, ಕೆನಡಕ್ಕೆ ಒಂದು ವಾರ ಭೇಟಿ: ಸಿಎಂ ಫ‌ಡ್ನವೀಸ್‌ ನಿರ್ಗಮನ

07:10 PM Jun 09, 2018 | Team Udayavani |

ಮುಂಬಯಿ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರಿಂದು ಅಮೆರಿಕ ಮತ್ತು ಕೆನಡಕ್ಕೆ ಒಂದು ವಾರದ ಅಧಿಕೃತ ಭೇಟಿಗಾಗಿ ಇಲ್ಲಿಂದ ನಿರ್ಗಮಿಸಿದರು. 

Advertisement

ಮಹಾರಾಷ್ಟ್ರದಲ್ಲಿ ಮೂಲ ಸೌಕರ್ಯ ಮತ್ತು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಕೈಜೋಡಿಸುವಂತೆ ಅಮೆರಿಕ ಮತ್ತು ಕೆನಡ ದೇಶಗಳ ಉದ್ಯಮ ನಾಯಕರನ್ನು ಫ‌ಡ್ನವೀಸ್‌ ಕೋರಲಿದ್ದು ಆ ನಿಟ್ಟಿನಲ್ಲಿ ಸಭೆ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಸಿಎಂ ಕಾರ್ಯಾಲಯ ಪ್ರಕಟನೆ ತಿಳಿಸಿದೆ. 

ಸಿಎಂ ಫ‌ಡ್ನವೀಸ್‌ ಅವರು ಕೆನಡದಲ್ಲಿನ ಮಾಂಟ್ರಿಯಲ್‌ ಮತ್ತು ಅಮೆರಿಕದಲ್ಲಿ ನ್ಯೂಯಾರ್ಕ್‌, ವಾಷಿಂಗ್ಟನ್‌ ಮತ್ತು ಸ್ಯಾನ್‌ ಫ್ರಾನ್ಸಿಸ್ಕೋಗೆ ಭೇಟಿ ನೀಡುವರೆಂದು ಪ್ರಕಟನೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next