Advertisement

ಬಿಎಂಸಿ ಮತ ಎಣಿಕೆ: ಅಮ್ರಾವತಿ,ಪಿಂಪ್ರಿ ಚಿಂಚವಾಡದಲ್ಲಿ ಬಿಜೆಪಿಗೆ ಜಯ

10:58 AM Feb 23, 2017 | Team Udayavani |

ಮುಂಬಯಿ : ಅತ್ಯುಗ್ರ ಕಾದಾಟವನ್ನು ಕಂಡಿರುವ ಬಿಎಂಸಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಚುರುಕಿನಿಂದ ಸಾಗುತ್ತಿದೆ. ಬಿಎಂಸಿಯಲ್ಲಿ ಶಿವಸೇನೆ ಮುನ್ನಡೆಯನ್ನು ಕಾಯ್ದುಕೊಂಡಿದೆ; ಆದರೆ ಪುಣೆಯಲ್ಲಿ ಬಿಜೆಪಿ ಮುಂದಿದೆ. 

Advertisement

ಬಿಜೆಪಿಯ ರೀಟಾ ಪಡೋಳೆ ಅಮ್ರಾವತಿ ಸ್ಥಾನವನ್ನು ಅವಿರೋಧವಾಗಿ ಜಯಿಸಿದ್ದಾರೆ. 

ಬೃಹನ್‌ ಮುಂಬಯಿ ಕಾರ್ಪೊರೇಶನ್‌ ಸಹಿತ 10 ಮುನಿಸಿಪಲ್‌ ಕಾರ್ಪೊರೇಶನ್‌ಗಳು ಹಾಗೂ 25 ಜಿಲ್ಲಾ ಪರಿಷತ್‌ಗಳಿಗೆ ನಡೆದಿರುವ ಚುನಾವಣೆಯ ಮತ ಎಣಿಕೆ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ.

ಬಿಎಂಸಿಯಲ್ಲಿ ಶಿವಸೇನೆ ಆರು ಸ್ಥಾನಗಳಲ್ಲಿ ಮುಂದಿದೆ. ಬಿಜೆಪಿ ಮತ್ತು  ಕಾಂಗ್ರೆಸ್‌ ತಲಾ ಎರಡರಲ್ಲಿ ಮುಂದಿವೆ. 

ಪುಣೆಯಲ್ಲಿ ಬಿಜೆಪಿ 9 ಸ್ಥಾನಗಳಲ್ಲಿ ಮುಂದಿದೆ; ಶಿವಸೇನೆ 3ರಲ್ಲಿ ಹಾಗೂ ಎನ್‌ಸಿಪಿ 4ರಲ್ಲಿ ಮುಂದಿದೆ. 

Advertisement

ಉಲ್ಲಾಸನಗರದಲ್ಲಿ ಶಿವಸೇನೆ 8 ಸ್ಥಾನಗಳಲ್ಲಿ ಮುಂದಿದೆ. 

ಸೋಲಾಪುರದಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿ ಮುಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next