Advertisement

ಮಹಾರಾಷ್ಟ್ರದ ಸಮುದ್ರ ತೀರಗಳು ಹೆಚ್ಚು ಮಲಿನ

10:15 AM Dec 23, 2019 | Sriram |

ಪಣಜಿ: ಮಹಾರಾಷ್ಟ್ರದ ಸಾಗರ ಕಿನಾರೆಗಳು ಮೈಕ್ರೋಪ್ಲಾಸ್ಟಿಕ್‌ ಹಾಗೂ ಮ್ಯಾಕ್ರೋ ಪ್ಲಾಸ್ಟಿಕ್‌ಗಳ ಆಗರವಾಗಿದ್ದು, ಅವು ಕರ್ನಾಟಕ, ಗೋವಾದ ಸಮುದ್ರ ಕಿನಾರೆಗಳಿಗಿಂತ ಹೆಚ್ಚು ಮಲಿನಗೊಂಡಿವೆ ಎಂದು ಗೋವಾ ಮೂಲದ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಓಶಿಯಾನೊಗ್ರಫಿ (ಎನ್‌ಐಒ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

Advertisement

ಸಂಶೋಧನಾ ವರದಿಯ ಆಧಾರದಲ್ಲಿ ನೆದರ್ಲೆಂಡ್‌ ಮೂಲದ “ಕೆಮೋಸ್ಪಿಯರ್‌’ ಎಂಬ ನಿಯತಕಾಲಿಕೆ ಲೇಖನ ಪ್ರಕಟವಾಗಿದೆ. “”ಮಹಾರಾಷ್ಟ್ರದ ಬೀಚ್‌ಗಳಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್‌ ಸಂಗ್ರಹಣೆಯಾಗಿದೆ. ಸಮುದ್ರಕ್ಕೆ ಹತ್ತಿರದ ಭೂಮಿಯಲ್ಲಿ ಪ್ಲಾಸ್ಟಿಕ್‌ ಕಾರ್ಖಾನೆಗಳು, ಬಂದರುಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕಾರ್ಖಾನೆಗಳು ಇರುವುದೇ ಈ ಮಾಲಿನ್ಯಕ್ಕೆ ಕಾರಣ” ಎಂದು ಲೇಖನದಲ್ಲಿ ಹೇಳಲಾಗಿದೆ.

ಪತ್ತೆಯಾದ ಪ್ಲಾಸ್ಟಿಕ್‌ನಲ್ಲಿ ಪಾಲಿಮರ್‌ ಮಾದರಿಯ ಪ್ಲಾಸ್ಟಿಕ್‌ ಹೆಚ್ಚಾಗಿದೆ. ಇದರಿಂದ, ಮಹಾರಾಷ್ಟ್ರದ 10ಕ್ಕಿಂತಲೂ ಹೆಚ್ಚು ಬೀಚ್‌ಗಳು ಕಳೆದೆರಡು ವರ್ಷಗಳಲ್ಲಿ ಅಧ್ವಾನಗೊಂಡಿವೆ. ಪ್ಲಾಸ್ಟಿಕ್‌ನ ವಿಷವು ಸಾಗರ ತೀರದ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.

ಪ್ಲಾಸ್ಟಿಕ್‌ ಮಾಲಿನ್ಯದ ನಿರ್ಮೂಲನೆಗೆ ಏಕಬಳಕೆಯ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮರುಬಳಕೆಯ ಪ್ಲಾಸ್ಟಿಕ್‌ ಉದ್ಯಮ ಹಾಗೂ ಬಳಕೆಗೆ ಉತ್ತೇಜನ ನೀಡಬೇಕು ಎಂದು ಎನ್‌ಐಒ ವಿಜ್ಞಾನಿಗಳಾದ ಡಾ. ಮಹುವಾ ಹಾಗೂ ಡಾ. ದುಷ್ಯಂತ್‌ ಮಹಾರಾಣಾ ನೇತೃತ್ವದ ಸಂಶೋಧಕರ ತಂಡ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next