ಬೆಳಗಾವಿ: ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಅಂಬೋಲಿ ಅರಣ್ಯದಲ್ಲಿ ಬಾಂಬ್ ಸ್ಫೋಟ ಟ್ರಯಲ್ ನಡೆಸಿದ್ದ ಶಂಕಿತ ಉಗ್ರರಿಗೆ ಆಶ್ರಯ ನೀಡಿ, ಆರ್ಥಿಕ ಸಹಾಯ ಮಾಡಿದ್ದ ಮೆಕ್ಯಾನಿಕಲ್ ಎಂಜಿನಿಯರ್‌ನನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಜತೆಗೆ ಇತ್ತ ನಿಪ್ಪಾಣಿ, ಸಂಕೇಶ್ವರದಲ್ಲಿ ಉಗ್ರರು ನೆಲೆಸಿದ್ದ
ಸ್ಥಳಗಳಲ್ಲಿಯ ಸಿಸಿ ಕೆಮರಾ ದೃಶ್ಯಗಳ ತುಣುಕುಗಳನ್ನು ಸಂಗ್ರಹಿಸುತ್ತಿದೆ.
ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಮಂಡಣಗಡ ತಾಲೂಕಿನ ಪಣದೇರಿ ಗ್ರಾಮದ ಸಿಮಾಬ್ ನಸರುದ್ದೀನ್ ಖಾಜಿ (27) ಎಂಬಾತನನ್ನು ಎಟಿಎಸ್ ತಂಡ ಬಂ ಧಿಸಿದ್ದು, ಆತನನ್ನು ನ್ಯಾಯಾಲಯ ಆ.5ರ ವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಸಿಮಾಬ್ ಖಾಜಿ ಖಾಸಗಿ ಕಂಪೆನಿಯಲ್ಲಿ ವಾರ್ಷಿಕ 15 ಲಕ್ಷ ರೂ. ವೇತನ ಪಡೆಯುತ್ತಿದ್ದ. ತಾನು ಗಳಿಸಿದ ಸಂಬಳದಲ್ಲಿ ಸ್ವಲ್ಪ ಹಣವನ್ನು ನಿಷೇಧಿ ತ ಐಸಿಸ್ ಉಗ್ರ ಸಂಘಟನೆಗಳ ಚಟುವಟಿಕೆಗಳಿಗೆ ನೀಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಪುಣೆಯಿಂದ ಅಂಬೋಲಿ ಅರಣ್ಯಕ್ಕೆ ಬಂದು ಬಾಂಬ್ ಸ್ಫೋಟದ ಟ್ರಯಲ್ ನಡೆಸಿದ್ದ ಇಬ್ಬರು ಶಂಕಿತ ಉಗ್ರರು ನೆಲೆಸಿದ್ದ ನಿಪ್ಪಾಣಿ ಹಾಗೂ ಸಂಕೇಶ್ವರದ ಆಶ್ರಯತಾಣಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿಪ್ಪಾಣಿ, ಸಂಕೇಶ್ವರದಲ್ಲಿ ಎಷ್ಟು ದಿನ ಉಳಿದುಕೊಂಡಿದ್ದರು, ಇವರಿಗೆ ಆಶ್ರಯ ನೀಡಿ ದವರು ಯಾರು ಎಂಬ ಮಾಹಿತಿ ಪಡೆಯುತ್ತಿದ್ದಾರೆ.
2008ರ ನ.26ರಂದು ಮುಂಬಯಿ ಮೇಲೆ ನಡೆದಿದ್ದ ದಾಳಿ ಮಾದರಿಯಲ್ಲಿ ಮುಂಬಯಿಯಲ್ಲಿ ಮತ್ತೂಂದು ದಾಳಿ ನಡೆಸಲು ಶಂಕಿತರು ಯೋಜಿಸಿದ್ದರು. ಮುಂಬಯಿಯ ಛಾಪಡ್ ಹೌಸ್‌ನ ವಿವಿಧ ಚಿತ್ರಗಳು ಶಂಕಿತ ಉಗ್ರರಿಂದ ಸಿಕ್ಕಿವೆ.
ಈಗಾಗಲೇ ಎಟಿಎಸ್ ಬಂಧನದಲ್ಲಿರುವ ಮಧ್ಯಪ್ರದೇಶ ಮೂಲದ ಮೊಹ್ಮದ್ ಇಮ್ರಾನ್ ಮೊಹ್ಮದ್ ಯುಸೂಫ್ ಖಾನ್ ಉಫ್ì ಅಮೀರ್ ಅಬ್ದುಲ್ ಹಮೀದ್ ಖಾನ್ ಹಾಗೂ ಮೊಹ್ಮದ್ ಯುನೂಸ್ ಮೊಹ್ಮದ್ ಯಾಕೂಬ್ ಸಾಕಿ ಎಂಬಿಬ್ಬರು ವಿಚಾರಣೆ ವೇಳೆ ವಿಧ್ವಂಸಕ ಕೃತ್ಯ ನಡೆಸುವ ಅನೇಕ ವಿಷಯಗಳನ್ನು ಬಾಯಿ ಬಿಡುತ್ತಿದ್ದಾರೆ. ಅಂಬೋಲಿ ಅರಣ್ಯ ಪ್ರದೇಶದಲ್ಲಿ ಜನ ಸಂಚಾರ ಇರುವುದಿಲ್ಲ. ಹೀಗಾಗಿ ಇಲ್ಲಿ ಬಾಂಬ್ ಸ್ಫೋಟ ಪ್ರಾಯೋಗಿಕ ಪರೀಕ್ಷೆ ನಡೆಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಜತೆಗೆ ರತ್ನಾಗಿರಿ, ಕೊಲ್ಲಾಪುರ, ಸತಾರಾಗಳಲ್ಲೂ ಬಾಂಬ್ ಸ್ಫೋಟ ಟ್ರಯಲ್ ನಡೆಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎಂದು ತಿಳಿದು ಬಂದಿದೆ.