Advertisement

ಮಹಾರಾಷ್ಟ್ರದ ಪ್ರತಿ ಶಾಲೆಯಲ್ಲೂ ಮರಾಠಿ ಭಾಷೆ ಕಡ್ಡಾಯ

10:06 AM Feb 29, 2020 | Hari Prasad |

ಮುಂಬಯಿ: ಮಹಾರಾಷ್ಟ್ರದ ಪ್ರತಿ ಶಾಲೆಯಲ್ಲೂ ಮರಾಠಿ ಭಾಷೆ ವಿಷಯ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಈ ಕುರಿತು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲೂ ಮರಾಠಿ ಕಲಿಕೆ ಕಡ್ಡಾಯವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೊಳಿಸಲಾಗುವುದು. ಈ ಆದೇಶ ಉಲ್ಲಂ ಸಿದ ಶಾಲೆಗಳಿಗೆ ಒಂದು ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಮರಾಠಿ ಭಾಷೆ ಸಚಿವ ಸುಭಾಶ್‌ ದೇಸಾಯಿ ತಿಳಿಸಿದ್ದಾರೆ.

Advertisement

ದಂಡ ಮೊತ್ತ ಅಸಂಬದ್ಧ: ಇದನ್ನು ಸ್ವಾಗತಿಸಿರುವ ವಿಪಕ್ಷದ ನಾಯಕ ದೇವೇಂದ್ರ ಫ‌ಡ್ನವೀಸ್‌, ಈ ಕಾಯ್ದೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಆದೇಶ ಉಲ್ಲಂಘಿಸಿದ ಶಾಲೆಗೆ ಒಂದು ಲಕ್ಷ ರೂ. ದಂಡ ವಿಧಿಸುವುದು ಕಡಿಮೆ ಮೊತ್ತವಾಗಿದೆ. ಬಹುತೇಕ ಶಾಲೆಗಳಲ್ಲಿ 5ರಿಂದ 12 ಲಕ್ಷ ರೂ. ಡೊನೇಷನ್‌ ಸಂಗ್ರಹಿಸುತ್ತಿರುವಾಗ, ಕೇವಲ ಒಂದು ಲಕ್ಷ ದಂಡ ವಿಧಿಸಿರುವುದು ಅಸಂಬದ್ಧವಾಗಿದೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next