Advertisement
ಎನ್‌ಸಿಪಿ ಶರದ್ ಬಣಕ್ಕೆ “ಕಹಳೆ ಊದುತ್ತಿರುವ ವ್ಯಕ್ತಿ’ಯ ಚಿಹ್ನೆಶರದ್ ಪವಾರ್ ಬಣದ ನ್ಯಾಶನಲ್ ಕಾಂಗ್ರೆಸ್ ಪಕ್ಷಕ್ಕೆ(ಎನ್‌ಸಿಪಿ) “ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಚುನಾವಣ ಆಯೋಗ ಮಂಜೂರು ಮಾಡಿದೆ. ಮುಂದಿನ ಚುನಾವಣೆಯಲ್ಲಿ ಈ ಬಣದ ಅಭ್ಯರ್ಥಿಗಳು ಈ ಚಿಹ್ನೆಯ ಅಡಿ ಸ್ಪರ್ಧಿಸಲಿದ್ದಾರೆ. “ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸದ ಪ್ರತೀಕವಾಗಿದ್ದ ಕಹಳೆಯು, ಅಂದು ದಿಲ್ಲಿಯ ದೊರೆಗಳ ಸದ್ದಡಗಿಸಿತ್ತು. ಈಗ ಮೊತ್ತೂಮ್ಮೆ ದಿಲ್ಲಿಯಲ್ಲಿ ಆಳ್ವಿಕೆ ನಡೆಸುತ್ತಿರುವವರ ಸದ್ದಡಗಿಸಲು ಶರದ್ ಪವಾರ್ ನಾಯಕತ್ವದಲ್ಲಿ ಕಹಳೆ ಮೊಳಗಲಿದೆ’ ಎಂದು ಪಕ್ಷ ಎಕ್ಸ್ ಮಾಡಿದೆ.
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಏಕಾಂಗಿ ಸ್ಪರ್ಧೆಯ ಘೋಷಣೆ ಮಾಡಿದ್ದ ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ)ನ ಫಾರೂಕ್ ಅಬ್ದುಲ್ಲಾರ ಮನವೊಲಿಸಲು ಕಾಂಗ್ರೆಸ್ ಮುಂದಾಗಿದೆ. ಇಲ್ಲಿ ಒಟ್ಟು 6 ಲೋಕಸಭೆ ಕ್ಷೇತ್ರಗಳಿವೆ. ಮೈತ್ರಿ ಉಳಿಸಿಕೊಳ್ಳುವ ಸಲು ವಾಗಿ 3 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡುವಂತೆ, ಉಳಿದ 3ರಲ್ಲಿ ಎನ್‌ಸಿ ಸ್ಪರ್ಧಿಸುವಂತೆ ಕಾಂಗ್ರೆಸ್ ಮನವಿ ಮಾಡಿದೆ. ಆದರೆ ಎನ್‌ಸಿ ಇನ್ನೂ ಯಾವುದೇ ನಿರ್ಧಾ ರಕ್ಕೆ ಬಂದಿಲ್ಲ ಎನ್ನಲಾಗಿದೆ.