Advertisement

Maharashtra: ಹಾಡಹಗಲೇ ಪ್ರಿಯತಮೆಯನ್ನು ಕೊಚ್ಚಿ ಕೊಂದ ಪ್ರಿಯಕರ; ಬಂಧನ

05:46 PM Jun 18, 2024 | Team Udayavani |

ಮಹಾರಾಷ್ಟ್ರ: ಹಾಡಹಗಲೇ ಪ್ರಿಯಕರ ಪ್ರೇಯಸಿಯನ್ನು(20ವರ್ಷ) ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಮಂಗಳವಾರ (ಜೂನ್‌ 18) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:Vijayapura: ಕೆರೆಗೆ ಬಿದ್ದ ವಿದ್ಯುತ್ ತಂತಿ; ಮೀನು ಹಿಡಿಯಲು ಹೋಗಿ ಹೆಣವಾದ ಬಾಲಕರು

ಬೆಳಗ್ಗೆ ಚಿಂಚ್‌ ಪಾಡಾ ಪ್ರದೇಶದಲ್ಲಿ ಪ್ರೇಯಸಿ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವ ವಿಡಿಯೋ ವಾಸಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವೈರಲ್‌ ಆಗಿತ್ತು.

ಪಿಟಿಐ ವರದಿ ಪ್ರಕಾರ, ಕೊಲೆಗೀಡಾದ ಆರತಿ ಯಾದವ್‌ ಬೆಳಗ್ಗೆ ಪ್ರಿಯತಮ ರೋಹಿತ್‌ ಯಾದವ್‌ ಜತೆ ಕಚೇರಿ ಕೆಲಸಕ್ಕೆ ಹೋಗಲು ಇಬ್ಬರೂ ಒಟ್ಟಾಗಿ ಬರುತ್ತಿದ್ದ ವೇಳೆ ದಾರಿ ಮಧ್ಯೆಯೇ ಜಗಳ ಆರಂಭವಾಗಿತ್ತು ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ ಪ್ರಿಯಕರ ಹರಿತವಾದ ಆಯುಧದಿಂದ ಆರತಿಯನ್ನು ಹಲವಾರು ಬಾರಿ ಇರಿದಿದ್ದ. ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಕೂಡಾ ಆರೋಪಿ ಯಾದವ್‌ ಇರಿಯುವುದನ್ನು ಮುಂದುವರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ತಿಳಿಸಿದ್ದರು. ಯುವತಿಯ ದೇಹದ ಮೇಲೆ 18 ಬಾರಿ ಇರಿದಿರುವ ಗಾಯಗಳಿವೆ ಎಂದು ಹಿರಿಯ ಇನ್ಸ್‌ ಪೆಕ್ಟರ್‌ ಜೈರಾಜ್‌ ಪಿಟಿಐಗೆ ವಿವರ ನೀಡಿದ್ದಾರೆ.

ಕೊಲೆ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಈ ಜೋಡಿ ಕಳೆದ ಆರು ವರ್ಷಗಳಿಂದ ರಿಲೇಷನ್‌ ಶಿಪ್‌ ಹೊಂದಿತ್ತು. ಆದರೆ ಯುವತಿ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಶಂಕೆ ಪ್ರಿಯಕರನದ್ದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next