Advertisement

ಮರವಂತೆ: ವರಾಹ ಮಾರಸ್ವಾಮಿ ಜಾತ್ರೆ ಸಂಪನ್ನ

06:15 AM Jul 24, 2017 | Team Udayavani |

ಮರವಂತೆ: ಪುರಾಣ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದದಲ್ಲಿ ಕರ್ಕಾಟಕ ಅಮಾವಾಸ್ಯೆಯ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೆರವೇರಿತು.

Advertisement

ವಿವಿಧ ಭಾಗಗಳಿಂದ ಭಕ್ತರು ಸಹಸ್ರಾರು  ಸಂಖ್ಯೆಯಲ್ಲಿ  ನಸುಕಿನಲ್ಲಿಯೇ ದೇಗುಲಕ್ಕೆ ಬಂದು ಸಮುದ್ರ ಹಾಗೂ ಸೌರ್ಪಣಿಕಾ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿದರು.

ಭೂಮಾತೆಯನ್ನು ದುಷ್ಟ ರಕ್ಕಸರಿಂದ ರಕ್ಷಿಸಿದ ಶ್ರೀ ವರಾಹ ಸ್ವಾಮಿಯು ಲೋಕಕ್ಕೆ ಕಲ್ಯಾಣ ವನ್ನು ಉಂಟುಮಾಡಿ ಸಕಲ ಜೀವರಾಶಿಗಳನ್ನು ಕಾಯುವವನು. ಆದರಿಂದ ಸಂಪ್ರದಾಯದಂತೆ ವಿವಾಹಿತ ನವಜೋಡಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದ್ದರು.

ಶ್ರೀ ದೇವರು ಪ್ರಕೃತಿ ವಿಕೋಪದಿಂದ ಹಾಗೂ ಕಷ್ಟಕಾರ್ಪಣಗಳಿಂದ ರಕ್ಷಿಸಿ ಪೊರೆಯುವ ಮಹಿಮಾ ನ್ವಿತನೂ, ಅಭಯದಾತನೂ ಆಗಿ  ಭಕ್ತ ಕೋಟಿ ಜನರನ್ನು ಕಾಯುತ್ತಿರುವ ದೇವರಲ್ಲಿ ಕರಾವಳಿಯ ಭಾಗದ ಮೀನುಗಾರರು ಮೀನುಗಾರಿಕೆಯಲ್ಲಿ ಸಮೃದ್ಧಿಯನ್ನು ಕರುಣಿಸು ಎಂದು ಪ್ರಾರ್ಥನೆಗೈದರು.

ಜಟಿ ಜಟಿ ಮಳೆ
ಮುಂಜಾನೆಯಿಂದ ಮಳೆ ಮತ್ತು ಬಿಸಿಲಿನ ನಡುವೆ ಸ್ಪರ್ಧೆ ಏರ್ಪಟ್ಟಂತೆ ಕಂಡುಬಂತು. ಸ್ವಲ್ಪ ಸಮಯ ಆಗಾಗ  ಉರಿಬಿಸಿಲು ಇದ್ದರೆ ನಡುವೆ ಒಂದಿಷ್ಟು ಹೊತ್ತು ತಂಗಾಳಿಯ ಜತೆ ಜಟಿಜಟಿಯಾಗಿ ಸುರಿಯುತ್ತಿರುವ ಮಳೆಯಿಂದ ಭಕ್ತರಿಗೆ ತಣ್ಣನೆಯ ಅನುಭವ ಒದಗಿಸಿತ್ತು.

Advertisement

ಬಿಗಿ ಬದ್ರತೆ
ರಾ.ಹೆ.ಯಲ್ಲಿ ದೇವಸ್ಥಾನದ ಜಾತ್ರಾ ಸ್ಥಳವಾಗಿರುವುದರಿಂದ ಟ್ರಾಫಿಕ್‌ ವ್ಯವಸ್ಥೆ ಸೇರಿದಂತೆ, ಸಮುದ್ರ ತೀರಗಳಲ್ಲಿ ಹಾಗೂ ನದಿ ತೀರಗಳಲ್ಲಿ ಜನತೆಯ ಸುರಕ್ಷೆಯ ದೃಷ್ಟಿಯಿಂದ ಅನೇಕ ಪೊಲೀಸ್‌ ಸಿಬಂದಿಯನ್ನು  ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next