ಪುಣೆ: ಇತ್ತೀಚೆಗೆ ಮೈಸೂರಿನ ಮಹಾರಾಜರಾದ ಯದುವೀರ ಚಾಮ ರಾಜ ಒಡೆಯರ್ ಅವರನ್ನು ಮೈಸೂರಿನ ಅರಮನೆಯಲ್ಲಿ ಪುಣೆ ಕನ್ನಡ ಸಂಘದ ಪರವಾಗಿ ಅಭಿನಂದಿಸಲಾಯಿತು.
ಯದುವೀರ ಒಡೆಯರ್ ಅವರು ಈ ಹಿಂದೆ ಮಹಾರಾಜ ಪಟ್ಟವನ್ನು ಅಲಂಕರಿ ಸುವ ಮೊದಲು ಪುಣೆಗೆ ಆಗಮಿಸಿ ಪುಣೆ ಫೆಸ್ಟಿವಲ್‌ನಲ್ಲಿ ಸಹಭಾಗಿಯಾಗಿ¨ªಾಗ ಕನ್ನಡ ಸಂಘ ಪುಣೆಗೆ ಭೇಟಿಯಿತ್ತು ಕಾವೇರಿ ವಿದ್ಯಾ ಸಮೂಹದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿರುವುದಲ್ಲದೆ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು.
ಪುಣೆ ಕನ್ನಡ ಸಂಘದ ಪರವಾಗಿ ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯರು ಮೈಸೂರಿನ ಅರಮನೆಯಲ್ಲಿ ಭೇಟಿಯಾಗಿ ಅಭಿನಂದಿಸಿ ಸತ್ಕರಿಸಿದರು. ಯದುವೀರರಿಗೆ ಅವರ ಪಟ್ಟಾಭಿಷೇಕ, ಕಲ್ಯಾಣ ಸಮಾರಂಭ, ಪುತ್ರ ಪ್ರಾಪ್ತಿ ಮತ್ತು ದೀಪಾವಳಿಯ ಶುಭ ಕಾಮನೆಗಳನ್ನು ತಿಳಿಸಿದರು.
ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ
ಅತ್ಯಂತ ಯುವ, ವಿದೇಶಿ ಶಿಕ್ಷಣ ಪ್ರಾಪ್ತ ಸೌಮ್ಯ ಸ್ವಭಾವದ ಮಹಾರಾಜ ಯದುವೀರ ಅವರು ತನ್ನ ಪುಣೆಯ ಕನ್ನಡ ಸಂಘದ ಭೇಟಿ ಮತ್ತು ಕನ್ನಡಿಗರ ನಿಸ್ವಾರ್ಥ ಮನೋಭಾವ ಮತ್ತು ಸ್ಥಳೀಯರ ಜತೆಗೆ ಬೆರೆತು ವಿದ್ಯಾ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಬಗ್ಗೆ ಪ್ರಶಂಸಿಸಿ ಅಭಿನಂದನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಆಚಾರ್ಯ ಉಪಸ್ಥಿತರಿದ್ದರು.