Advertisement

ಸ್ವಸ್ಥ ಸಮಾಜಕ್ಕೆ ಮಹಾಂತಶ್ರೀ ಕೊಡುಗೆ ಅನನ್ಯ

10:59 AM May 20, 2018 | Team Udayavani |

ಕಲಬುರಗಿ: ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯಂತಹ ಮುಂತಾದ ಕೆಟ್ಟ ಚಟಗಳಿಗೆ ದಾಸರಾಗಿ ತಾವು ಹಾಳಾಗುವ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದ ಅಸಂಖ್ಯಾತ ಯುವ ಜನತೆಯ ಚಟ ಬಿಡಿಸಿ, ಅವರ ಬಾಳನ್ನು ಸುಂದರವಾಗಿಸುವ ಜೊತೆಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ ಇಲಕಲ್‌ನ ಪೂಜ್ಯ ಡಾ| ಮಹಾಂತ ಶಿವಯೋಗಿಗಳನ್ನು ಸಮಾಜ ಮರೆಯುವಂತಿಲ್ಲವೆಂದು ಎಚ್‌.ಬಿ. ಪಾಟೀಲ ಹೇಳಿದರು.

Advertisement

ಚಿತ್ತರಗಿಯ ವಿಜಯಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್‌ನ ಪೀಠಾಧಿಪತಿಗಳಾಗಿದ್ದ ಡಾ| ಮಹಾಂತ
ಶಿವಯೋಗಿಗಳು ಲಿಂಗೈಕ್ಯರಾದ ನಿಮಿತ್ತ ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಜೆಆರ್‌
ನಗರದ ಬಳಗದ ಗ್ರಂಥಾಲಯದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಗುರು ನಮನ ಸಭೆಯಲ್ಲಿ ಅವರು
ಮಾತನಾಡಿದರು. 

ಶ್ರೀಗಳು ಬಸವ ತತ್ವವನ್ನು ಎಲ್ಲೆಡೆ ಪ್ರಸರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಸರಳ, ಸಜ್ಜನಿಕೆಯ ಮೂರ್ತಿಯಾಗಿದ್ದ
ಅವರು ಒಬ್ಬ ಆದರ್ಶ ಗುರುಗಳು ಹೇಗೆ ಇರಬೇಕೆಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. 
ಬಳಗದ ಗೌರವಾಧ್ಯಕ್ಷ ಶಾಂತಪ್ಪ ನರೋಣಾ, ರಾಜಶೇಖರ ಮರಡಿ, ಉಮೇಶ ಪಾಟೀಲ, ಸೂರ್ಯಕಾಂತ ಕೋಬಾಳ, ಅಮಿತ ಕುಲಕರ್ಣಿ, ಸಚಿನ್‌ ಬತಗುಣಕಿ, ಬಾಬುರಾವ ಪೂಜಾರಿ, ರಮೇಶ ಪಾಟೀಲ, ಶರಣಬಸಪ್ಪ ಮದರಿ, ಶಿವಲಿಂಗಪ್ಪ ಶಿವಣಗಿ, ರಾಮಚಂದ್ರ ಭಜಂತ್ರಿ, ಬಸವರಾಜ ಜಮಾದಾರ, ಮಲ್ಲಿಕಾರ್ಜುನ ಹೊಡಲ್‌ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next