Advertisement

ಮೂಢನಂಬಿಕೆ ಕಿತ್ತೂಗೆಯುವಲ್ಲಿ ಮಹಾಂತ ಶ್ರೀ ಸೇವೆ ಅನನ್ಯ

02:39 PM May 20, 2018 | Team Udayavani |

ಲಿಂಗಸುಗೂರು: ಬಸವತತ್ವ ಸಾರುವ ಮೂಲಕ ಸಮಾಜದಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೂಗೆಯುವ ನಿಟ್ಟಿನಲ್ಲಿ ಇಲಕಲ್‌ನ ಡಾ| ಮಹಾಂತ ಶ್ರೀಗಳ ಪರಿಶ್ರಮ ಅನನ್ಯವಾಗಿದೆ ಎಂದು ಲೋಕೋಪಯೋಗಿ ಎಇಇ ಅಶೋಕ ಬರಗುಂಡಿ ಹೇಳಿದರು.

Advertisement

ಇಲಕಲ್‌ನ ಮಹಾಂತ ಜೋಳಿಗೆಯ ಡಾ| ಮಹಾಂತ ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಶನಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಅಜ್ಞಾನವೆಂಬ ಕತ್ತಲಲ್ಲಿರುವ ನಮ್ಮನ್ನು ಮಹಾಂತಪ್ಪಗಳು ಬೆಳಕಿನ ಕಡೆಗೆ ಕರೆದುಕೊಂಡು ಹೋಗಿದ್ದಾರೆ.

ಭಕ್ತರಿಂದ ದುರ್ಗುಣ ಬೇಡುವ ಮೂಲಕ ಅವರ ಬದುಕನ್ನು ಹಸನಾಗಿಸಿದವರು. ಮೂಢನಂಬಿಕೆಯಲ್ಲಿ ತೇಲುತ್ತಿರುವ ಸಮಾಜಕ್ಕೆ ನಿಜಾಚರಣೆಯ ವೈಚಾರಿಕೆಯನ್ನು ಭಕ್ತರ ಅರಿವಿಗೆ ತರುವ ಮೂಲಕ ಇಂದಿನ ಸಮಾಜದಲ್ಲಿ ಹೊಸ ಸಂಸ್ಕೃತಿಯನ್ನೇ ಬಿತ್ತುತ್ತಿದ್ದ ಶ್ರೀಗಳು ನಾಡಿಗೆ ಮಾದರಿಯಾಗಿದ್ದರು. ಪೂಜ್ಯರು ಭೌತಿಕವಾಗಿ ನಮ್ಮಿಂದ ಅಗಲಿದ್ದರೂ, ಮಾನಸಿಕವಾಗಿ ಜೊತೆಯಲ್ಲಿದ್ದಾರೆ. ಅವರು ಹಾಕಿಕೊಟ್ಟ ಆದರ್ಶಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮುಖಂಡರಾದ ಶಿವಾನಂದ ಐದನಾಳ, ವೀರಣ್ಣ ಹುರಕಡ್ಲಿ, ಬಸವರಾಜ ಐದನಾಳ, ಶರಣಪ್ಪ ಸಕ್ರಿ, ಜಂಗಮಮೂರ್ತಿ, ವೀರೇಶ ಚಕ್ರಸಾಲಿ, ಡಾ| ಲತಾ ಹೆಸರೂರು, ವಿಶ್ವನಾಥ ಸಕ್ರಿ, ದೊಡ್ಡಪ್ಪ ಹೆಸರೂರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next