ಮುಂಬಯಿ:ಎಕ್ಸಿಟ್ ಪೋಲ್ ಸಮೀಕ್ಷೆಗೆ ಬಂದ ಅನಂತರ, ಅನೇಕ ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಸಮ್ಮಿಶ್ರವಾದ ಮಹಾಮೈತ್ರಿಯು ದೇಶದ ಹಿತದ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಶಿವಸೇನೆ ಹೇಳಿದೆ.
ಈ ಚುನಾವಣೆಯ ಫಲಿತಾಂ ಶದ ಅನಂತರ ಈ ಮಹಾಮೈತ್ರಿಗೆ ವಿಪಕ್ಷದಲ್ಲಿ ಕುಳಿತುಕೊಳ್ಳುವ ಹೊರತು ಬೇರೆ ಯಾವುದೇ ಸ್ಥಳಾವಕಾಶ ಉಳಿದಿಲ್ಲ. ರವಿವಾರ ಲೋಕಸಭೆ ಚುನಾವಣೆ ಮುಕ್ತಾ ಯಗೊಂಡಿದ್ದು, ಮೇ 23ರ ಗುರುವಾರ ಮತ ಏಣಿಕೆ ನಡೆಯಲಿದೆ. ಚುನಾವಣೆ ಮುಕ್ತಾಯಗೊಳ್ಳುತ್ತಲೆ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಟಿಸಿದೆ. ಇದರಲ್ಲಿ ಎನ್‌ಡಿಎಗೆ ಪೂರ್ಣ ಬಹುಮತದ ಸರಕಾರ ನಿರ್ಮಾಣ ಮಾಡಲಿದೆ ಎಂದು ಹೇಳಿದೆ.
ಶಿವಸೇನೆ ಪ್ರಕಾರ, ವಿಪಕ್ಷಗಳು ಎಕ್ಸಿಟ್ ಪೋಲ್ ಫಲಿತಾಂಶದ ಮಾದರಿ ಚುನಾವಣ ಫಲಿತಾಂಶವು ಬರಬಾರದು ಎಂದು ಅನಿಸುತ್ತಿದ್ದು, ಭಯ ಆರಂಭವಾಗಿದೆ ಎಕ್ಸಿಟ್ ಪೋಲ್‌ಗಳು ಬರೀ ಹೇಳಿಕೆಯಾಗಿ ಉಳಿಯಲಿ ಎಂದು ವಿಪಕ್ಷಗಳಿಗೆ ಅನಿಸುತ್ತದೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕರಲ್ಲದೆ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿಗೆ ಭೇಟಿ ನೀಡಿದ್ದಾರೆ. ಚುನಾವಣ ಫಲಿತಾಂಶದ ನಂತರ ಮೇ 23ರಂದು “ಸಂಭವನೀಯ ಮೈತ್ರಿ’ ಉಳಿದು ಕೊಂಡಿಲ್ಲ ಎಂಬ ಭರವಸೆ ಆಗಿದ್ದರಿಂದ ನಾಯ್ಡು ಇಲ್ಲಿಂದ ಅಲ್ಲಿಗೆ ಓಡುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.
ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶದ ವೈಎಸ್‌ಆರ್ ಕಾಂ ಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಆಂಧ್ರ ಪ್ರದೇಶದ ನೆರೆಯ ರಾಜ್ಯ ತೆಲಂ ಗಾಣದಲ್ಲಿ ಕೆ. ಚಂದ್ರಬಾಬು ರಾವ್ ನೇತೃತ್ವದ ಟಿಆರ್‌ಎಸ್, ನಾಯ್ಡು ಅವರ ಟಿಡಿಪಿ ವಿರುದ್ಧ ಬಹುಮತದ ಗೆಲುವು ಸಾಧಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ ವಿಪಕ್ಷ ಒಕ್ಕೂಟವು ಒಳಗಿಂದ ಒಳಗೆ ತುಂಡಾಗುತ್ತಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ, ವಿಪಕ್ಷಗಳ ಮಹಾ ಮೈತ್ರಿಯಲ್ಲಿ ಪ್ರಧಾನಮಂತ್ರಿ ಹು¨ªೆಗೆ 5 ಅಭ್ಯರ್ಥಿಗಳಿಗಿಂತ ಕಡಿಮೆಯಿಲ್ಲ ಎಂದು ಹೇಳಿದೆ. ಎಕ್ಸಿಟ್ ಪೋಲ್ ಸಮೀಕ್ಷೆಯ ಬಳಿಕ, ಪ್ರಧಾನಿಯಾ ಗುವ ನಿರೀಕ್ಷೆಯಲ್ಲಿದ್ದವರ ಕನಸು ಭಗ್ನವಾಗಿದೆ.
ಫಲಿತಾಂಶಗಳನ್ನು ಪ್ರಕಟಿಸಿದ ಅನಂತರ, ದೆಹಲಿಯಲ್ಲಿ (ಕೇಂದ್ರ) ಸ್ಥಿತಿಯು ಅಸ್ಥಿರವಾಗಲಿದೆ ಮತ್ತು ಅದರಿಂದ ಅವರು ಇದರ ಲಾಭವನ್ನು ಗಳಿಸಬೇಕೆಂದು ಭಾವಿಸುತ್ತಾರೆ ಎಂದು ಶಿವಸೇನೆ ಹೇಳಿದೆ.