Advertisement

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ

03:47 PM Feb 04, 2021 | Team Udayavani |

ಮಹಾಲಿಂಗಪುರ: ಪಟ್ಟಣದ ಸರಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸದಿದ್ದರೆ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ವತಿಯಿಂದ ಸಆಸ್ಪತ್ರೆಗೆ ಕೀಲಿ ಹಾಕಿ ಬೃಹತ್‌ ಪ್ರತಿಭಟನೆ ಮಾಡುತ್ತೇವೆ ಎಂದು ಪುರಸಭೆ ಕಾಂಗ್ರೆಸ್‌ ಸದಸ್ಯ ಯಲ್ಲನಗೌಡ ಪಾಟೀಲ, ಜೆಡಿಎಸ್‌ ಮುಖಂಡ ನಿಂಗಪ್ಪ ಬಾಳಿಕಾಯಿ ಎಚ್ಚರಿಸಿದರು.

Advertisement

ಬುಧವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಕಾಂಗ್ರೆಸ್‌ ಸದಸ್ಯ ಯಲ್ಲನಗೌಡ ಪಾಟೀಲ, ಜೆಡಿಎಸ್‌ ಮುಖಂಡ ನಿಂಗಪ್ಪ ಬಾಳಿಕಾಯಿ ಮಾತನಾಡಿ, ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಿಂದ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಂದ ಸಾರ್ವಜನಿಕರಿಗೆ  ಸರಿಯಾದ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಒಂದು ಶವ ಮತ್ತು ಮತ್ತೂಂದು ಶವ ಸಂಜೆ 6 ಗಂಟೆಗೆ ಪಿಎಂಗೆ ತರಲಾಗಿತ್ತು. ಆದರೆ ಪಿಎಂ ರಾತ್ರಿ 12 ಗಂಟೆಯ ನಂತರ ಮಾಡಿದರು. ಆಹಾರ-ನೀರು ಇಲ್ಲದೆ ಮುಂಜಾನೆಯಿಂದ  ಕಾಯುತ್ತಾ ಕುಳಿತ ಮೃತ ವ್ಯಕ್ತಿಯ ಸಂಬಂಧಿಕರ ತೊಂದರೆ ಕೇಳುವವರಾರು ಎಂದು ಪ್ರಶ್ನಿಸಿದರು.

ಕಳೆದ ಒಂದು ವರ್ಷದಿಂದ ಆಸ್ಪತ್ರೆಗೆ ಮುಖ್ಯ ವೈದ್ಯಾಧಿಕಾರಿಗಳು ಇಲ್ಲದೇ  ಇರುವ ಕಾರಣ ರೋಗಿಗಳು ನಿತ್ಯ ಪರದಾಡುವಂತಾಗಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಸಹ ಸರಿಯಾದ ವೇಳೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಆಸ್ಪತ್ರೆಯ ಕೆಲವು ಸಿಬ್ಬಂದಿ ಕಳೆದ ಸುಮಾರು 20 ವರ್ಷಗಳಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ವರ್ಗಾವಣೆಗೊಂಡ ವೈದ್ಯರಿಗೆ ಸಹಕಾರ ನೀಡುತ್ತಿಲ್ಲ. ಕಾರಣ ಕೂಡಲೇ ಬಹಳ ವರ್ಷಗಳಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಬೇರೆಡೆ  ವರ್ಗಾಯಿಸಿ ಇಲ್ಲಿ ಬೇರೆ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ನೂರಾರು ಸಮಸ್ಯೆಗಳ ಸರಮಾಲೆಯಂತಿರುವ ಮಹಾಲಿಂಗಪುರ ಸರಕಾರಿ ಆಸ್ಪತ್ರೆಯತ್ತ ತೇರದಾಳ ಮತಕ್ಷೇತ್ರದ ಶಾಸಕ  ಸಿದ್ದು ಸವದಿ ಹಾಗೂ ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ, ಕೂಡಲೇ ಇಲ್ಲಿಯ  ಸಮಸ್ಯೆಗಳಿಗೆ ಒಂದು ವಾರದೊಳಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಆಸ್ಪತ್ರೆಗೆ ಕೀಲಿ ಹಾಕಿ ಬ್ರಹತ್‌ ಪ್ರತಿಭಟಿಸುವದಾಗಿ ಎಚ್ಚರಿಸಿದರು.

 ಇದನ್ನೂ ಓದಿ : ಬಿಳಿಜೋಳ ಖರೀದಿಗೆ ನೋಂದಣಿ ಪ್ರಾರಂಭ

ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಮುಸ್ತಾಕ ಚಿಕ್ಕೋಡಿ, ಬಲವಂತಗೌಡ ಪಾಟೀಲ, ಪಕ್ಷದ ಮುಖಂಡರಾದ ಕೃಷ್ಣಗೌಡ ಪಾಟೀಲ, ವಿಜಯಗೌಡ ಪಾಟೀಲ, ಆನಂದ ಬಂಡಿ, ಸುನಿಲಗೌಡ ಪಾಟೀಲ, ಸಾಯಿನಾಥ ಉಪ್ಪಾರ, ಅಶೋಕ ತಳವಾರ, ಅನ್ವರ  ಮದ್ದೀನ, ಸದಾಶಿವ ಗೊಬ್ಬರದ, ಅನಿಲ ದೇಸಾಯಿ, ಮಹಾಲಿಂಗ ಮಾಳಿ, ಪರಸುರಾಮ ಮೇತ್ರಿ, ಬಸವರಾಜ ಮಾವಿನಹಿಂಡಿ,  ರಮೇಶ ಮಾಂಗ, ಲಕ್ಷ ¾ಣ ದೊಡಮನಿ, ಶ್ರೀಕಾಂತ ದೊಡಮನಿ ಸೇರಿದಂತೆ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next