Advertisement

ಮಹಾಲಿಂಗಪುರದಲ್ಲೊಂದು ಚುಕುಬುಕು ಶಾಲೆ

12:34 PM Mar 24, 2021 | Team Udayavani |

ಮಹಾಲಿಂಗಪುರ: ನೋಟಕ್ಕೆ ರೈಲಿನ ಬೋಗಿಗಳೇನಿಂತತ್ತೆ ಭಾಸವಾಗುವ ಕಟ್ಟಡ. 40ಕ್ಕಿಂತ ವಿದ್ಯಾರ್ಥಿಗಳಹಾಜರಿ. ಶಾಲೆ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ ಸುಂದರ ಉದ್ಯಾನವನ. ಇವೆಲ್ಲವೂ ಪಟ್ಟಣದ ಬುದ್ನಿಪಿ.ಡಿ.ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 1 ಇದರ ವಿಶೇಷತೆಗಳಾಗಿವೆ.

Advertisement

ಬುಡ್ನಿ ಶಾಲೆ ಈ ಭಾಗದ ಹೆಮ್ಮೆಯ ಶಾಲೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಹಾಜರಾತಿ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯನ್ನು ಚುಕುಬುಕು ಶಾಲೆಯಾಗಿಮಾರ್ಪಡಿಸಲಾಗಿದೆ. ಅಲ್ಲದೇ ಶಾಲೆ ಎದುರು ಸುಂದರಉದ್ಯಾನವನ ನಿರ್ಮಿಸಿ ಮಕ್ಕಳನ್ನು ಆಕರ್ಷಿಸುವಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಎಂ.ಡಿ.ಕಾಮರಡ್ಡಿ ಹಾಗೂ ಶಾಲಾ ಸಿಬ್ಬಂದಿಯ ಕಾರ್ಯ ಶ್ಲಾಘನೀಯ.

ರೈಲು ಬೋಗಿ ಮಾದರಿ ಕೊಠಡಿ: ಮರೇಗುದ್ದಿಯ ಪ್ರಕಾಶ ಕರಿಗಾರ ಹಾಗೂ ಮಹೇಶ ಹುಲ್ಯಾಳಸೇರಿದಂತೆ 5 ಜನರ ತಂಡ ಆರು ಕೊಠಡಿಗಳನ್ನು ರೈಲು ಬೋಗಿಗಳಂತೆ ಸಿದ್ಧಪಡಿಸಿದ್ದಾರೆ. ರೈಲಿಗೆಮಹಾಲಿಂಗಪುರ ಎಕ್ಸ್‌ಪ್ರೆಸ್‌ ಎಂದು ಹೆಸರಿಡಲಾಗಿದೆ.ಸ್ಥಳದಲ್ಲಿ ನೈಜವಾಗಿಯೂ ರೈಲು ನಿಂತಿದೆಯೆನೋಎಂಬಂತೆ ಭಾಸವಾಗುತ್ತದೆ. ಮುಖ್ಯ ಶಿಕ್ಷಕರಪತ್ನಿ ಹಣಮವ್ವ ಕಾಮರಡ್ಡಿ, ಸಾಲೆಯ ಸಹಶಿಕ್ಷಕಎಂ.ಎಚ್‌.ಚನಗೊಂಡ ಸಹ ಸೇವೆ ಸಲ್ಲಿಸಿದ್ದಾರೆ.

45 ಸಾವಿರದಲ್ಲಿ ರೈಲು ರೂಪ: ಚುಕುಬುಕು ಶಾಲೆಯಾಗಿ ನಿರ್ಮಾಣಗೊಳ್ಳಲು ಸುಮಾರು 4 5ಸಾವಿರ ರೂ. ಖರ್ಚಾಗಿದೆ. ಶಾಲಾ ಅನುದಾನದಿಂದ 15 ಸಾವಿರ ರೂ., ಕಲ್ಲಟ್ಟಿ ತೋಟದ ಕಬ್ಬಿನ ಗ್ಯಾಂಗ್‌ನಮಲ್ಲಿಕಾರ್ಜುನ ಹಂದಿಗುಂದ ತಂಡದವರಿಂದ 6ಸಾವಿರ ರೂ., ಶಾಲೆಯ ಪಾಲಕರು-ಪೋಷಕರಿಂದ 6 ಸಾವಿರ ರೂ., ಸ್ವತ: ಕಾಮರಡ್ಡಿಯವರೇ 15ಸಾವಿರ ರೂ.ನೀಡಿದ್ದಾರೆ. ಶಾಲೆಯ ಮುಂದಿರುವಚಿಕ್ಕ ಕೈತೋಟದ ಗಿಡಮರ ಪೋಷಿಸುತ್ತಿರುವುದುಮುಖ್ಯ ಶಿಕ್ಷಕ ಕಾಮರಡ್ಡಿಯವರ ಶೈಕ್ಷಣಿಕ ಕಳಕಳಿಗೆ ಸಾಕ್ಷಿಯಾಗಿದೆ.

Advertisement

ತಮ್ಮ ಈ ಕಾರ್ಯದಲ್ಲಿ ಸಲಹೆ ಹಾಗೂ ಸಹಕಾರ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ, ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ, ಸಿಆರ್‌ಸಿ ಎಸ್‌.ಎನ್‌.ಬ್ಯಾಳಿ, ಕಾನಿಪ ಅಧ್ಯಕ್ಷ ಎಸ್‌.ಎಸ್‌. ಈಶ್ವರಪ್ಪಗೋಳ, ಶಾಲೆಯ ತೋಟಕ್ಕೆ ದಿನಾಲು ಉಚಿತವಾಗಿ ನೀರು ಪೂರೈಸುವ ರೈತ ದುಂಡಪ್ಪ ಹವಾಲ್ದಾರ್‌,  ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಹಂದಿಗುಂದ, ಮಾಜಿ ಅಧ್ಯಕ್ಷ ರತ್ನಪ್ಪ ಹುಲ್ಯಾಳ, ಉಚಿತವಾಗಿ ಶ್ರಮದಾನ ಮಾಡಿದ ಇಮಾಮಸಾಬ ಸನದಿಯ ಸಹಕಾರ ಶ್ಲಾಘನೀಯ. ಎಂ.ಡಿ.ಕಾಮರಡ್ಡಿ, ಮುಖ್ಯ ಶಿಕ್ಷಕ, ಬುಡ್ನಿ ಪಿಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.1

ಸರಕಾರಿ ಶಾಲೆಗಳ ಶಿಕ್ಷಕರು ತಾವು ಪಡೆಯುವ ಸಂಬಳ ಹಾಗೂ ಕೆಲಸದ ವೇಳೆಯನ್ನು ಮೀರಿ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಅದು ಶೈಕ್ಷಣಿಕಸೇವೆಯಾಗುತ್ತದೆ. ಶಿಕ್ಷಕ ಎಂ.ಡಿ. ಕಾಮಗೌಡರ ಅವೆರಡನ್ನು ಮೀರಿ ಉತ್ತಮ ಕೆಲಸ ಮಾಡಿ ತೋಟದ ಶಾಲೆ ಅಭಿವೃದ್ಧಿಪಡಿಸಿ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. – ಶಂಕರಗೌಡ ಪಾಟೀಲ, ಬುದ್ನಿ ಪಿ.ಡಿ. ಹಿರಿಯರು

 

-ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next