Advertisement

ಸಂಖ್ಯಾಶಾಸ್ತ್ರಕ್ಕೆ ಮಹಾಲನೋಬಿಸ್‌ ಕೊಡುಗೆ ಅಪಾರ

11:14 AM Jun 30, 2020 | mahesh |

ದಾವಣಗೆರೆ: ದೇಶ, ಸಮಾಜದ ಸಮಗ್ರ ಅಭಿವೃದ್ಧಿಗೆ ಅಡಿಪಾಯವಾದ ಅಂಕಿ ಅಂಶಗಳಿಗೆ ಸಂಬಂಧಿಸಿದಂತೆ ಮಹತ್ವವಾದ ಕೊಡುಗೆ ನೀಡಿರುವ ಸಂಖ್ಯಾಶಾಸ್ತ್ರಜ್ಞ ಪ್ರೊ|
ಪಿ.ಸಿ. ಮಹಾಲನೋಬಿಸ್‌ ಸರ್ವರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಹೇಳಿದರು.

Advertisement

ಸೋಮವಾರ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಆರ್ಥಿಕ ಮತ್ತು ಸಾಂಖ್ಖಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರೊ| ಪಿ.ಸಿ. ಮಹಾಲನೋಬಿಸ್‌
ಜನ್ಮದಿನ ಹಾಗೂ 14ನೇ ಸಾಂಖೀಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಖ್ಯಾಶಾಸ್ತ್ರಕ್ಕೆ ಮಹಾಲನೋಬಿಸ್‌ ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ
ಅವರ ಜನ್ಮ ದಿನ ಜೂ. 29 ರಂದು ಸಾಂಖೀಕ ದಿನಾಚರಣೆಯನ್ನಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಆಚರಿಸಲಾಗುತ್ತಿದೆ ಎಂದರು.

ಜನರಲ್ಲಿ ಅರಿವು ಮೂಡಿಸುವುದು ಸಾಂಖ್ಖಿಕ ದಿನಾಚರಣೆಯ ಮುಖ್ಯ ಉದ್ದೇಶ. ಈ ಬಾರಿ ಸುಸ್ಥಿರ ಅಭಿವೃದ್ಧಿ ಗುರಿ-03 ರ ವಿಷಯ ಎಲ್ಲರಿಗೂ ಎಲ್ಲಾ ವಯೋವೃದ್ಧರಲ್ಲಿ ಆರೋಗ್ಯಕರ ಜೀವನವನ್ನು ಖಾತ್ರಿ ಪಡಿಸಿ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿ-05ರ ವಿಷಯ ಲಿಂಗ ಸಮಾನತೆ ಸಾಧಿ ಸಿ ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವ ಕುರಿತು ಜನರಲ್ಲಿ ಅರಿವು ಮೂಡಿಸುವುದಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಯಾವುದೇ ರಂಗದಲ್ಲಿ ಅಭಿವೃದ್ಧಿ ಕಾಣಬೇಕಿದ್ದರೆ ಅಂಕಿ- ಅಂಶಗಳ ಅವಶ್ಯಕತೆ ಇರುತ್ತದೆ. ವೈಯಕ್ತಿಕ ಅಥವಾ ಯಾವುದೇ
ರಂಗದಲ್ಲಿ ಅಭಿವೃದ್ಧಿಗೆ ನಿಖರವಾದ ಅಂಕಿ-ಅಂಶಗಳ ಪಾತ್ರ ಎಂಥದ್ದು ಎಂಬುದನ್ನು ತೋರಿಸಿಕೊಟ್ಟವರು ಮಹಾಲನೋಬಿಸ್‌ ಎಂದು ಸ್ಮರಿಸಿದರು.

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಮಾತನಾಡಿ, ಅಂಕಿ-ಅಂಶಗಳು ಯಾವುದೇ ಯೋಜನೆಗೆ ಅಡಿಪಾಯ. ಅಡಿಪಾಯ ಸರಿ ಇದ್ದರೆ ಮಾತ್ರ ಕಟ್ಟಡ ಸುಭದ್ರವಾಗಿರಲು ಸಾಧ್ಯ. ಅದೇ ರೀತಿ ನಿಖರವಾದ ಅಂಕಿ-ಅಂಶಗಳಿಂದ ಯಾವುದೇ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅಭಿವೃದ್ಧಿ ಮತ್ತು ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Advertisement

ಸಹಾಯಕ ಸಾಂಖ್ಖಿಕ ಅಧಿಕಾರಿ ವಿಜಯ್‌ ಬಡಿಗೇರ್‌ ಮಾತನಾಡಿ, ಮುಂದಿನ ಪೀಳಿಗೆಗೆ ಯಾವುದೇ ರೀತಿಯಲ್ಲಿ ರಾಜೀಯಾಗದಂತೆ ಉತ್ತಮ ಆರೋಗ್ಯವನ್ನು ನೀಡುವುದು ಈ
ಯೋಜನೆಯ ಮುಖ್ಯ ಧ್ಯೇಯ ಎಂದರು. ಮತ್ತೋರ್ವ ಸಹಾಯಕ ಸಾಂಖ್ಖಿಕ ಅಧಿಕಾರಿ ಸಿದ್ದೇಶ್‌ ಮಾತನಾಡಿ, 2011 ರಲ್ಲಿ ನಡೆದ ಕಡೆಯ ಜನಗಣತಿ 15ನೇ ಜನಗಣತಿಯಾಗಿದೆ.
2021ರಲ್ಲಿ 16 ನೇ ಜನಗಣತಿ ಆಗಬೇಕಿದೆ. ಜನಗಣತಿ ಮೂಲಕ ಲಿಂಗಾನುಪಾತವನ್ನು ನೋಡಿ ಸುಸ್ಥಿರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌, ಜಿಲ್ಲಾ ಕಾರ್ಮಿಕ ಅಧಿಕಾರಿ
ಇಬ್ರಾಹಿಂ ಸಾಬ್‌, ಶಾರದಾ ಜಿ. ದೊಡ್ಡಗೌಡರ್‌, ಮಲ್ಲಾ ನಾಯಕ್‌, ಡಿ. ಏಕನಾಥ್‌, ಸಾಮಾಜಿಕ ಭದ್ರತೆ ಶಾಖೆಯ ಸಹಾಯಕ ನಿರ್ದೇಶಕಿ ನೀಲಮ್ಮ ಇತರರು ಇದ್ದರು.

ಕೋವಿಡ್‌-19 ಪರಿಸ್ಥಿತಿಯನ್ನು ದಿಟ್ಟವಾಗಿ ಮತ್ತು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯ ಮಾಡುತ್ತಿರುವುದು ಅಂಕಿ-ಅಂಶಗಳೇ ಎಂಬುದು ಗಮನಾರ್ಹ. ಒಬ್ಬ ಕಾರ್ಮಿಕನಿಂದ ಹಿಡಿದು ಜಿಲ್ಲೆಯಲ್ಲಿ ಅಗತ್ಯವಾದ ಎಲ್ಲ ರೀತಿಯ ಅಂಕಿ ಅಂಶಗಳನ್ನು ಸಂಗ್ರಹಿಸಿರುವುದರಿಂದಲೇ ಕೋವಿಡ್‌ ವಿರುದ್ಧ ಸಮರ ಸಾರಲು ಸಾಧ್ಯವಾಗಿದೆ. ಪೂಜಾರ ವೀರಮಲ್ಲಪ್ಪ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next