ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ. 15ರಿಂದ ಅ. 24ರ ವರೆಗೆ ಜರಗುವ ಉಚ್ಚಿಲ ದಸರಾ ಉತ್ಸವ-2023ರ ಪ್ರಯುಕ್ತ ದೇಗುಲದ ಪರಿಸರ ಮತ್ತು ಪಡುಬಿದ್ರಿಯಿಂದ ಕಾಪುವಿನವರೆಗೆ ಅಳವಡಿಸಿರುವ ಭವ್ಯವಾದ ವಿದ್ಯುದ್ದೀ ಪಾಲಂಕಾರವನ್ನು ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಬಂಜಾರ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಡಾ| ಜಿ. ಶಂಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತಸವಾಗಿದೆ. ಅದ್ದೂರಿಯಾಗಿ, ನಾಡಹಬ್ಬದ ರೀತಿ ಯಲ್ಲಿ ಆಯೋಜನೆಗೊಂಡ ಈ ಉತ್ಸವ ರಾಜ್ಯದ ಜನತೆಯ ಹಬ್ಬವಾಗಲಿ ಎಂದು ಹಾರೈಸಿದರು.
ತಾಯಿ ಮಹಾಲಕ್ಷ್ಮೀಯ ಅನು ಗ್ರಹ, ಭಕ್ತರ ಮತ್ತು ಸಮಾಜ ಬಾಂಧ ವರ ಸಹಕಾರದಿಂದ ಉಚ್ಚಿಲ ದಸರಾ ಆಯೋಜನೆಗೊಳ್ಳುತ್ತಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ಹೇಳಿದರು.
ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಧಾರ್ಮಿಕ ವಿಧಿ ನೆರವೇರಿಸಿದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಉದ್ಯಮಿ ಆನಂದ ಸಿ. ಕುಂದರ್, ದ.ಕ. ಮೊಗ ವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂ ಪಳ್ಳಿ, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಎ. ಕುಂದರ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ.ಅಮೀನ್, ಸದಸ್ಯರಾದ ಗಂಗಾಧರ ಸುವರ್ಣ ಎರ್ಮಾಳ್, ಶ್ರೀಪತಿ ಭಟ್ ಉಚ್ಚಿಲ, ಮೋಹನ್ ಬೆಂಗ್ರೆ, ರಾಘವೇಂದ್ರ ಬಳ್ಳಾರಿ, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ಪ್ರಮುಖರಾದ ಸುಗುಣಾ ಕರ್ಕೇರ, ಮನೋಜ್ ಕಾಂಚನ್, ಮೋಹನ್ ಬೇಂಗ್ರೆ, ಶಂಕರ್ ಸಾಲ್ಯಾ ನ್, ಶಿವಕುಮಾರ್ ಮೆಂಡನ್, ಮೋಹನ್ ಬೆಂಗ್ರೆ, ಮೋಹನ್ ಬಂಗೇರ, ಸರ್ವೋತ್ತಮ ಕುಂದರ್, ದಿನೇಶ್ ಮೂಳೂರು, ರಾಜೇಂದ್ರ ಹಿರಿಯಡ್ಕ, ರವೀಂದ್ರ ಶ್ರೀಯಾನ್, ಗೌತಮ್ ಕೋಡಿಕಲ್, ಶಿವರಾಮ್ ಕೆ.ಎಂ., ಸತೀಶ್ ಅಮೀನ್ ಬಾಕೂì ರು, ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು.
ಇಂದು ಚಾಲನೆ
ಅ. 15 ರ ಬೆಳಗ್ಗೆ 9.30ಕ್ಕೆ ಶಾಲಿನಿ ಜಿ. ಶಂಕರ್ ತೆರೆದ ಸಭಾಂ ಗಣದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ಗೊಳ್ಳಲಿದೆ. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಉಚ್ಚಿಲ ದಸರಾ ಮತ್ತು ಯುವ ದಸರಾಕ್ಕೆ ಚಾಲನೆ ನೀಡುವರು. ಬಳಿಕ ಮಹಾಲಕ್ಷ್ಮೀ ಅನ್ನಛತ್ರ ಮತ್ತು ಅತಿಥಿಗೃಹ ಲೋಕಾರ್ಪಣೆಗೊಳ್ಳಲಿದೆ.
ಬೂತಾಯಿ ಸರ; ಬೆಳ್ಳಿ ವೀಣೆ, ಕಿರೀಟ ಸಮರ್ಪಣೆ
ಮಲ್ಪೆ ಬೇಸಗೆ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಮಹಾಲಕ್ಷ್ಮೀ ದೇವಿಗೆ ಚಿನ್ನದ ಬೂತಾಯಿ ಮೀನಿನ ಹಾರ ಮತ್ತು ಶಾರದಾ ಮಾತೆಗೆ ದ.ಕ. ಮೊಗವೀರ ಮಹಾಜನ ಸಂಘ, ಕ್ಷೇತ್ರಾಡಳಿತ ಮಂಡಳಿ ಸಹಕಾರದೊಂದಿಗೆ ಬೆಳ್ಳಿಯ ವೀಣೆ, ಕಿರೀಟ, ಪುಸ್ತಕ, ಪೆನ್ನು ಸಮರ್ಪಣೆಗೊಳ್ಳಲಿದೆ.