Advertisement

ಮಹಾಜನ್‌ ವರದಿ ಯಥಾವತ್‌ ಜಾರಿಗೆ ಒತ್ತಾಯ

01:24 PM Nov 02, 2021 | Team Udayavani |

ಅಫಜಲಪುರ: ಅಖಂಡ ಕರ್ನಾಟಕ ಮತ್ತು ಕನ್ನಡ ಭಾಷಿಕರಿಗೆ ನ್ಯಾಯ ಒದಗಿಸುವ ಮಹಾಜನ್‌ ವರದಿಯನ್ನು ಸರ್ಕಾರ ಯಥಾವತ್‌ ಜಾರಿಗೆ ತರಬೇಕೆಂದು ಶಾಸಕ ಎಂ.ವೈ. ಪಾಟೀಲ ಒತ್ತಾಯಿಸಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 66ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸ್ವಾಭಿಮಾನಿ ಕನ್ನಡಿಗರು. ಕನ್ನಡವನ್ನು ಸ್ವಾಭಿಮಾನದಿಂದ ಬೆಳೆಸೋಣ ದುರಾಭಿಮಾನ ಬೇಡ ಎಂದರು.

ಕೆರಳದ ಕಾಸರಗೋಡು, ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರದ ಭಾಗಗಳು ಕರ್ನಾಟಕಕ್ಕೆ ಸೇರಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಬ್ಟಾಳಿಕೆ ನಡೆಯುತ್ತಿದೆ. ಅಲ್ಲಿನ ಕನ್ನಡ ಶಾಲೆಗಳಿಗೆ ರಾಜ್ಯ ಸರ್ಕಾರ ಹೆಚ್ಚು ಅನುದಾನ ನೀಡಬೇಕು. ರಾಜ್ಯಗಳಲ್ಲಿನ ಕನ್ನಡ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬೇಕು ಎಂದರು.

ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ, ಯಮನಪ್ಪ ಬಾಸಗಿ ರವಿ ನಂದಶೆಟ್ಟಿ ನಿಂಗು ಚಲವಾದಿ ಮುಖಂಡರಾದ ಜಮೀಲ್‌ ಗೌಂಡಿ, ರಾಜು ಆರೇಕರ, ಶ್ರೀಮಂತ ಬಿರಾದಾರ, ಜೈ ಕರವೇ ಅಧ್ಯಕ್ಷ ಸುರೇಶ ಅವಟೆ, ಕರವೇ ತಾಲೂಕು ಅಧ್ಯಕ್ಷ ರಾಜು ಉಕ್ಕಲಿ, ತಾಪಂ ಇಒ ರಮೇಶ ಸುಲ್ಪಿ. ಡಿಎಚ್‌ಒ ರತ್ನಾಕರ ತೋರಣ, ಬಿಇಒ ಚಿತ್ರಶೇಖರ ದೇಗಲಮಡಿ, ಬಿಸಿಎಂ ಅಧಿಕಾರಿ ಡಾ| ಕರಬಸಮ್ಮ, ಸಮಾಜ ಕಲ್ಯಾಣ ಅಧಿಕಾರಿ ಚೇತನ ಗುರಿಕಾರ, ಸಿದ್ಧರಾಮ ಅಜಗೊಂಡ, ಪುರಸಭೆ ಅಧಿಕಾರಿ ಶಂಭುಲಿಂಗ ದೇಸಾಯಿ, ಕೃಷಿ ಅಧಿಕಾರಿ ಎಚ್‌.ಎಸ್‌.ಗಡಗಿಮನಿ ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next