ಮಹದೇವಪುರ: ರಾತ್ರಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಮಾರನೇ ದಿನವೇ ಯುವತಿಯ ಮೃತದೇಹ ಮನೆಯ ಮುಂದೆಯೇ ಪತ್ತೆಯಾಗಿರುವ ಘಟನೆ ಮಹದೇವಪುರದ ಮಹೇಶ್ವರಿ ನಗರದ ಲಕ್ಷ್ಮಿ ಸಾಗರ ಲೇಔಟ್ನಲ್ಲಿ ನಡೆದಿದೆ.
ಶೆಲ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡ್ತಿದ್ದ ಮಹಾನಂದಾ (21) ಮೃತ ದುರ್ದೈವಿ. ಈಕೆ ಕಲಬುರಗಿ ಮೂಲದ ಯುವತಿ.
ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಮನೆ ಮುಂದೆಯೇ ಶವವಾಗಿ ಪತ್ತೆಯಾಗಿದ್ದಾಳೆ.
ಮಹಾನಂದಾಳನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಕತ್ತಿನ ಭಾಗದಲ್ಲಿ ಗುರುತು ಪತ್ತೆಯಾಗಿದೆ. ನಿನ್ನೆ ಕೆಲಸಕ್ಕೆ ಹೋಗದೆ ಮಹಾನಂದಾ ಮನೆಯಲ್ಲೇ ಇದ್ದಳು. ಕಲಬುರಗಿ ಮೂಲದ ಅಕ್ಕ-ತಂಗಿ ಇಬ್ಬರು ಶೆಲ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡ್ತಿದ್ರು. ನಿನ್ನೆ ರಾತ್ರಿ ಅಡುಗೆ ಮಾಡೋದಕ್ಕೆ ಅಂತ ಮಹಾನಂದಾ ಸ್ಟೌ ಮೇಲೆ ಅಕ್ಕಿ ಇಟ್ಟಿದ್ದಳು. ಬಳಿಕ ಮನೆಯಿಂದ ಹೊರಹೋಗಿ ಕಾಣೆಯಾಗಿದ್ದಳು.ರಾತ್ರಿಯಾದರೂ ತಂಗಿ ಮನೆಗೆ ಬಾರದ ಹಿನ್ನೆಲೆ ಮಹಾನಂದಾಳ ಅಕ್ಕ ಮಹದೇವಪುರ ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಳು. ಬೆಳಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಮನೆಯ ಬಳಿ ಸಹೋದರಿಯ ಮೃತದೇಹವನ್ನು ಕಂಡು ಮಹಾನಂದಾಳ ಅಕ್ಕ ಆಘಾತಕ್ಕೆ ಒಳಗಾಗಿದ್ದಾರೆ. ಯಾರೋ ದುಷ್ಕರ್ಮಿಗಳು ಮೃತದೇಹ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಅಫೀಸರ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.ಎಂದು ವೈಟ್ ಪೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: Explainer:ಉತ್ತರಾಖಂಡ್ – ನೂರಾರು ಅಕ್ರಮ ಸಮಾಧಿ ಸ್ಮಾರಕ, ದೇವಸ್ಥಾನ ತೆರವು; ಕೈ ವಾದವೇನು?