ವಿಜಯಪುರ: ನಗರದ ಹೊರ ವಲಯದಲ್ಲಿ ಕನ್ನಾಳ ಕ್ರಾಸ್ ಬಳಿ ನಡೆದಿದ್ದ ಮಹಾದೇವ ಭೈರಗೊಂಡ ಮೇಲಿನ ಹತ್ಯೆಗಾಗಿ ನಡೆದ ಗುಂಡಿನ ದಾಳಿ ಯತ್ನ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ಮತ್ತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ16 ಕ್ಕೆ ಏರಿಕೆಯಾಗಿದೆ.
ಪ್ರಕರಣದ ತನಿಖೆಗೆ ನೇಮಿಸಿರುವ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದ ಪೊಲೀಸರ ತಂಡ ಮೂವರನ್ನು ಬಂಧಿಸಿದೆ ಎಂದು ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.
ಬಂಧಿತರನ್ನು ವಿಜಯಪುರ ನಗರದ ಇಂಡಿ ರೋಡನ ಬಂಬಳ ಅಗಸಿ ನಿವಾಸಿ 24 ವರ್ಷದ ಹಸನ ಡೋಂಗ್ರಿ ಉರ್ಫ ಡೋಂಗ್ರಿಸಾಬ್ ಮೆಹಬೂಬಸಾಬ ಬಡಿಗೇರ, 24 ವರ್ಷದ ಕಲ್ಲಪ್ಪ ಉರ್ಫ ಮುದುಕಪ್ಪ ಅಶೋಕ ಬಜಂತ್ರಿ ಹಾಗೂ 21 ವರ್ಷದ ಈರಣ್ಣ ಅಶೋಕ ಬಜಂತ್ರಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಕೋವಿಡ್ ಉಲ್ಬಣ ಭೀತಿ : ಚಳಿಗಾಲ ಅಧಿವೇಶನ ನಾಗ್ಪುರದಿಂದ ಮುಂಬೈಗೆ ಶಿಫ್ಟ್!
ಸದರಿ ಆರೋಪಗಳನ್ನು ಬಂಧಿಸಿದ ತಂಡದಲ್ಲಿ ಡಿಎಸ್ಪಿ ಗಳಾದ ಕೆ.ಸಿ.ಲಕ್ಷ್ಮೀನಾರಾಯಣ, ಪೊಲೀಸ್ ಅಧಿಕಾರಿಗಳಾದ ರವೀಂದ್ರ ನಾಯ್ಕೋಡಿ, ಬಸವರಾಜ ಮೂಕರ್ತಿಹಾಳ, ಎಂ.ಕೆ. ದ್ಯಾಮಣ್ಣವರ, ಸಿ.ಬಿ.ಬಾಗೇವಾಡಿ, ಸುನಿಲ ಕಾಂಬಳೆ, ಸುರೇಶ ಬೆಂಡೆಗುಂಬಳ, ಸೋಮಶೇಖರ್ ಜುಟ್ಟಲ ಸರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿತ್ತು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತಂಡವನ್ನು ಎಸ್ಪಿ ಅಗರವಾಲ ಅಭಿನಂದಿಸಿದ್ದಾರೆ.