Advertisement

ಮಹಾದೇವ ಭೈರಗೊಂಡ ಶೂಟ್ ಔಟ್ ಪ್ರಕರಣ : ಮತ್ತೆ ಇಬ್ಬರ ಬಂಧನ, ಬಂಧಿತರ‌ ಸಂಖ್ಯೆ 21ಕ್ಕೆ ಏರಿಕೆ

08:00 PM Nov 13, 2020 | mahesh |

ವಿಜಯಪುರ : ಈ ತಿಂಗಳ 2 ರಂದು ನಗರದ ಹೊರ ವಲಯದಲ್ಲಿ ಮಹಾದೇವ ಭೈರಗೊಂಡ ಹಾಗೂ ಸಂಗಡಿಗರ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣದಲ್ಲಿ ವಿಜಯಪುರ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತರನ್ನು ವಿಜಯಪುರ ನಗರದ ಬಂಬಳ ಅಗಸಿ ನಿವಾಸಿಗಳಾದ 23 ವರ್ಷದ ಹಣಮಂತ ಸೋಮಪ್ಪ ಮಳೆಪ್ಪನವರ ಉರ್ಫ ಪೂಜಾರ ಹಾಗೂ 20 ವರ್ಷದ ಈರಣ್ಣ ರಾಮ ಬಡಿಗೇರ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ವಶಕ್ಕೆ ಪಡೆದುದಾಗಿ ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.

ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ರಚನೆಯಾಗಿರುವ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದ ತನಿಖಾ ತಂಡದ ಕಾರ್ಯಕ್ಕೆ ಎಸ್ಪಿ ಅನುಪಮ ಅಗರವಾಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next