Advertisement

Mahadev: 18 ಮಂದಿ ವಿರುದ್ಧ ಕೇಸು

11:11 PM Nov 11, 2023 | Pranav MS |

ಲಕ್ನೋ: ಮಹಾದೇವ್‌ ಆ್ಯಪ್‌ ಪ್ರಕರಣ ಸಂಬಂಧಿಸಿದಂತೆ ಉತ್ತರಪ್ರದೇಶ ಸಾಮಾಜಿಕ ವಿರೋಧಿ ಚಟುವಟಿಕೆ (ತಡೆ) ಕಾಯ್ದೆ ಅನ್ವಯ ನೋಯ್ಡಾ ಪೊಲೀಸರು 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಸೆಕ್ಟರ್‌ 39 ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮಹಾದೇವ್‌ ಆ್ಯಪ್‌ ಅನ್ನು ನಿರ್ಬಂಧಿಸುವಂತೆ ಸರಕಾರಕ್ಕೂ ಪೊಲೀಸ್‌ ಆಯುಕ್ತೆ ಲಕ್ಷ್ಮೀಸಿಂಗ್‌ ಪತ್ರ ಬರೆದಿದ್ದಾರೆ. ಆ್ಯಪ್‌ ಪ್ರಕರಣದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರಿಗೆ 508 ಕೋಟಿ ರೂ. ಸಂದಾಯವಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸಿ, ನಾಲ್ವರನ್ನು ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next