ಹೊಸದಿಲ್ಲಿ: ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಸುಮಾರು 388 ಕೋಟಿ ರೂ. ಮೌಲ್ಯದ ಹೊಸ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ(ED) ಶನಿವಾರ(ಡಿ7) ತಿಳಿಸಿದೆ.
ಹಗರಣದಲ್ಲಿ ಛತ್ತೀಸ್‌ಗಢದ ಅನೇಕ ಉನ್ನತ ಮಟ್ಟದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇವುಗಳಲ್ಲಿ ಮಾರಿಷಸ್ ಮೂಲದ ಕಂಪನಿ ಟನೋ, ಹೂಡಿಕೆ ಅವಕಾಶಗಳ ನಿಧಿಯಿಂದ ದುಬೈ ಮೂಲದ “ಹವಾಲಾ ಆಪರೇಟರ್” ಹರಿ ಶಂಕರ್ ಟಿಬ್ರೆವಾಲ್ ಅವರು FPI ಮತ್ತು FDI ಮೂಲಕ ಮಾಡಿದ ಹೂಡಿಕೆಯೂ ಸೇರಿದೆ.
ಛತ್ತೀಸ್‌ಗಢ, ಮುಂಬೈ ಮತ್ತು ಮಧ್ಯಪ್ರದೇಶದಲ್ಲಿ ಅನೇಕ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಪ್ರವರ್ತಕರು, ಪ್ಯಾನಲ್ ಆಪರೇಟರ್‌ಗಳು ಮತ್ತು ಪ್ರವರ್ತಕರ ಸಹವರ್ತಿಗಳ ಹೆಸರಿನಲ್ಲಿ ಆಸ್ತಿಗಳನ್ನು ಹೊಂದಲಾಗಿದೆ ದೆ ಎಂದು ಇ ಡಿ ಹೇಳಿಕೆಯಲ್ಲಿ ತಿಳಿಸಿದೆ.
387.99 ಕೋಟಿ ರೂ. ಮೌಲ್ಯದ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಡಿಸೆಂಬರ್ 5 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಇ ಡಿ ತಿಳಿಸಿದೆ.
ಈ ಪ್ರಕರಣದಲ್ಲಿ ತಿಬ್ರೆವಾಲ್ ಅವರನ್ನು ಏಜೆನ್ಸಿ ತನಿಖೆ ನಡೆಸುತ್ತಿದೆ.