Advertisement

ಮಹದಾಯಿ: ಹೊಸ ಕ್ಯಾತೆ ತೆಗೆದ ಗೋವಾ

06:25 AM Aug 17, 2018 | |

ಪಣಜಿ: ಮಹದಾಯಿ ನದಿ ನೀರನ್ನು ತಿರುಗಿಸಿ ಕರ್ನಾಟಕವು ಹೈಡ್ರೋ ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳುವ ಯೋಜನೆಯನ್ನು ನಾವು ವಿರೋಧಿ ಸಲೇಬೇಕು. ಕಸ್ತೂರಿ ರಂಗನ್‌ ವರದಿ ಪ್ರಕಾರ ಇಂತಹ ಯೋಜನೆಗಳನ್ನು ಪಶ್ಚಿಮ ಘಟ್ಟಗಳಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 

Advertisement

ಇದರಿಂದಾಗಿ ಮಹದಾಯಿ ನದಿ ನೀರನ್ನು ಕರ್ನಾಟಕ ತಿರುಗಿಸಿಕೊಳ್ಳುವುದರ ವಿರುದ್ಧ ಗೋವಾ ಸರ್ಕಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಸಾಲಿಸಿಟರ್‌ ಜನರಲ್‌ ಆತ್ಮಾರಾಮ ನಾಡಕರ್ಣಿ ತಿಳಿಸಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದು, ಮಹದಾಯಿ ಹೋರಾಟ ಮುಕ್ತಾಯವಾಯಿತು ಎನ್ನುವಷ್ಟರಲ್ಲಿಯೇ ಗೋವಾ ಮತ್ತೆ ಹೊಸ ಖ್ಯಾತೆ ತೆಗೆಯಲು ಸಂಚು ರೂಪಿಸುತ್ತಿದೆ. ನಾವು ಪಶ್ಚಿಮಘಟ್ಟ ಸಂರಕ್ಷಿತ ಅರಣ್ಯ ಪ್ರದೇಶ ರಕ್ಷಿಸಬೇಕಿದೆ. ಇಂತಹ ಯೋಜನೆಗಳಿಂದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶಕ್ಕೆ ಧಕ್ಕೆಯುಂಟಾಗಲಿದೆ. 

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳುವುದಕ್ಕೆ ನಾವು ವಿರೋಧ ವ್ಯಕ್ತಪಡಿಸದಿದ್ದರೆ ಪಶ್ಚಿಮ ಘಟ್ಟ ಅರಣ್ಯ ನಾಶವಾಗಲಿದೆ. ಮಹದಾಯಿ ಹೋರಾಟಗಾರರು ಸುಮ್ಮನೆ ಕುಳಿತುಕೊಳ್ಳಬಾರದು. ಕರ್ನಾಟಕವು ಕಳಸಾ ಬಂಡೂರಿ ಭಾಗದಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿ ಕುರಿತಂತೆ ಹೆಚ್ಚಿನ ಗಮನವಹಿಸಬೇಕು. ಹೋರಾಟಗಾರರು ಅಲರ್ಟ್‌ ಆಗಿರಬೇಕು. ಅಲ್ಲಿ ನಡೆಯುವ ಪ್ರತಿಯೊಂದು ವಿಷಯಗಳ ಮಾಹಿತಿ ಪಡೆಯಲು ರಡಾರ್‌ ಅಂಟೇನಾವನ್ನು ಅಳವಡಿಸಬೇಕೆಂದು ಗೋವಾ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಇದರಿಂದಾಗಿ ಮಹದಾಯಿ ಹೋರಾಟ ಟ್ರಿಬುನಲ್‌ ತೀರ್ಪಿನ ನಂತರವೂ ಹೊಸ ತಿರುವು ಪಡೆದುಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next