ಪಣಜಿ:ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಇಂದು ತೆರೆ ಬೀಳಲಿದೆ ಎಂಬ ಕುತೂಹಲದ ನಡುವೆಯೇ ಗೋವಾ ಸಿಎಂ ಮನೋಹರ್ ಪರ್ರೀಕರ್ ಅವರು, ಗೋವಾ ಹಿತ ಬಲಿಕೊಡುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಬುಧವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಮಹದಾಯಿ ವಿಚಾರದಲ್ಲಿ ಸಭೆ ನಡೆದಿತ್ತು, ಅಲ್ಲದೇ ತಮ್ಮ ಎಲ್ಲಾ ಅಹವಾಲನ್ನು ಗೋವಾ ಸಿಎಂ ಪರ್ರೀಕರ್ ಆಲಿಸಿದ್ದು, ಗುರುವಾರ ಮಹದಾಯಿ ಕುರಿತು ಮಹತ್ವದ ಘೋಷಣೆಯನ್ನು ಹುಬ್ಬಳ್ಳಿಯಲ್ಲಿ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದರು.
ತರುಣ್ ಭಾರತ್ ಪತ್ರಿಕೆಯ ಸಂದರ್ಶನದಲ್ಲಿ ಪರ್ರೀಕರ್ ಹೇಳಿದ್ದೇನು?
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಗೋವಾ ಜನರ ಹಿತ ಬಲಿಕೊಡಲ್ಲ. ಗೋವಾ ಜನರು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ. ಗೋವಾ ಜನರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮನೋಹರ್ ಪರ್ರೀಕರ್ ಅವರು ತರುಣ್ ಭಾರತ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಅವರು ಗೋವಾ ವಿರೋಧಿ ಧೋರಣೆ ತಳೆಯಬಾರದು ಎಂದು ಗೋವಾ ಸಚಿವರು, ಶಾಸಕರು ಒತ್ತಡ ಹೇರಿರುವುದಾಗಿ ಮಾಧ್ಯಮದ ವರದಿ ಹೇಳಿದೆ.