Advertisement

ಮಹದಾಯಿ ಅಂತಿಮ ತೀರ್ಪು;ರಾಜ್ಯಕ್ಕೆ 13.5 TMC ನೀರು :ಸಂಭ್ರಮ  

04:24 PM Aug 14, 2018 | |

ಹೊಸದಿಲ್ಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದದ ಸಂಬಂಧ ಅಂತಿಮ ತೀರ್ಪು ಇಂದು ಮಂಗಳವಾರ ಸಂಜೆ ಹೊರ ಬಿದ್ದಿದ್ದು, ರಾಜ್ಯಕ್ಕೆ 13.5 ಟಿಎಂಸಿ ನೀರು ದೊರಕಿದ್ದು, ಕರ್ನಾಟಕಕ್ಕೆ ಒಂದು ಹಂತದಲ್ಲಿ ಯಶಸ್ಸು ದೊರಕಿದಂತಾಗಿದೆ. 

Advertisement

ಜೆ.ಎಂ.ಪಾಂಚಾಲ ನೇತೃತ್ವದ ಮಹದಾಯಿ ನ್ಯಾಯ ಮಂಡಳಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ  ನೀರನ್ನು ಹಂಚಿ  ಅಂತಿಮ ತೀರ್ಪನ್ನು ಹೊರ ಹಾಕಿದೆ. 12 ಸಂಪುಟಗಳಲ್ಲಿ ತೀರ್ಪು ಪ್ರಕಟಿಸಿದ್ದು, ಪ್ರಕಟಿತ ಎಲ್ಲಾ ಸಂಪುಟಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. 

5.5 ಟಿಎಂಸಿ ನೀರು ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಆ ಪೈಕಿ 4 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಯ ಬಿಡಲಾಗುತ್ತದೆ. 

ಮಹದಾಯಿ ಜಲವಿದ್ಯುತ್‌ ಯೋಜನೆಗೆ ಅನುಮತಿ ನೀಡಿದ್ದು, 8 ಟಿಎಂಸಿ ವಿದ್ಯುತ್‌ ಯೋಜನೆಗಾಗಿ ಬಳಸಿಕೊಳ್ಳಲು ಸೂಚನೆ ನೀಡಿದೆ. 

ಭಾರೀ ಕುತೂಹಲ ಮೂಡಿಸಿದ್ದ  ತೀರ್ಪಿನ ಕುರಿತಾಗಿ  ಧಾರವಾಡ ಭಾಗದ ರೈತ ಹೋರಾಟಗಾರರು ಸಿಹಿ ಸಂಚಿ ಸಂಭ್ರಮಿಸಿದ್ದಾರೆ. ಕರ್ನಾಟಕದ ಪರ ವಾದ ಮಂಡನೆ ಮಾಡಿದ ವಕೀಲರಿಗೆ ಅಭಿನಂದಿಸಿದ್ದಾರೆ. ಸಾವಿರಕ್ಕೂ ಹೆಚ್ಚು ದಿನ ಮಹದಾಯಿಗಾಗಿ ಹೋರಾಟ ನಡೆದಿತ್ತು.  

Advertisement

ಮಹದಾಯಿಯಲ್ಲಿಯ 200 ಟಿಎಂಸಿ ಅಡಿ ನೀರಿನಲ್ಲಿ ಕೇವಲ 9 ಟಿಎಂಸಿ ಅಡಿ ನೀರನ್ನು ಗೋವಾ ಬಳಸಿಕೊಳ್ಳುತ್ತಿತ್ತು. ಇನ್ನುಳಿದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿತ್ತು. ಕರ್ನಾಟಕದಲ್ಲಿ ಹರಿಯುವ 45 ಟಿಎಂಸಿ ಅಡಿ ನೀರಿನ ಪೈಕಿ  14.98 ಟಿಎಂಸಿ ಅಡಿ ನೀರು ನೀಡುವಂತೆ  ಕರ್ನಾಟಕ ವಾದ ಮಂಡನೆ ಮಾಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next