Advertisement

ಮಹಾದಾಯಿ: ರಾಜ್ಯಕ್ಕೆ ಅನ್ಯಾಯ

12:47 AM Dec 19, 2019 | mahesh |

ಬೆಂಗಳೂರು: ಮಹಾದಾಯಿ ಕುಡಿಯುವ ನೀರು ಯೋಜನೆ ವಿಚಾರದಲ್ಲಿ ರಾಜ್ಯಕ್ಕೆ “ಮಹಾ’ ಮೋಸವಾಗಿದೆ. ಯೋಜನೆ ಕೈಗೆತ್ತಿಕೊಳ್ಳಲು ಯಾವುದೇ ಅಡ್ಡಿ ಇಲ್ಲ ಎಂದು ಉಪಚುನಾವಣೆಗೂ ಮುನ್ನ ಭರವಸೆ ನೀಡಿದ್ದ ಕೇಂದ್ರ ಪರಿಸರ ಸಚಿವಾಲಯ, ತನ್ನದೇ ಒಪ್ಪಿಗೆ ಆದೇಶವನ್ನು ತಡೆಹಿಡಿದಿದೆ. ಈ ಮೂಲಕ ಕೇಂದ್ರದಲ್ಲಿ ಯಾವುದೇ ಸರಕಾರ ಬಂದರೂ “ರಾಜ್ಯಕ್ಕೆ ಅನ್ಯಾಯ’ ಎಂಬುದು ಜಾಹೀರಾಗಿದೆ.

Advertisement

ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯ ಮಂಡಳಿ ನೀಡಿರುವ ಆದೇಶದಂತೆ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಉಪಸ್ಥಿತಿಯಲ್ಲೇ ಕಳೆದ ಅಕ್ಟೋಬರ್‌ 17ರಂದು ಪರಿಸರ ಸಚಿವ ಜಾಬ್ಡೇಕರ್‌, ಕರ್ನಾಟಕಕ್ಕೆ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ ನೀಡಿರುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಈಗ ತನ್ನ ಆದೇಶ ತಡೆ ಹಿಡಿಯುವ ಮೂಲಕ ರಾಜ್ಯದ ಜನತೆ, ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ಮೋಸ ಮಾಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next