Advertisement

ವಿಧಾನಸಭೆ ಗ್ರಂಥಾಲಯಕ್ಕೆ ಮಹಾಭಾರತ ಸಂಪುಟ

10:14 AM Dec 23, 2019 | Team Udayavani |

ಉಡುಪಿ: ಸುಮಾರು ನೂರು ವರ್ಷಗಳ ಅನಂತರ ಪರಿಷ್ಕೃತಗೊಂಡು ಇತ್ತೀಚೆಗೆ ಪಲಿಮಾರು ಮಠದ ತಣ್ತೀ ಸಂಶೋಧನ ಸಂಸತ್‌ ವತಿಯಿಂದ ಮುದ್ರಣಗೊಂಡ ಮಹಾಭಾರತ ಗ್ರಂಥದ ಕನ್ನಡ ಆವೃತ್ತಿ (37 ಸಂಪುಟ), ಸಂಸ್ಕೃತ ಆವೃತ್ತಿಗಳ (24 ಸಂಪುಟ) ತಲಾ ಒಂದು ಪ್ರತಿಯನ್ನು ರಾಜ್ಯ ವಿಧಾನಸಭೆಯ ಗ್ರಂಥಾಲಯಕ್ಕೆ ಒಪ್ಪಿಸಲಾಗಿದೆ.

Advertisement

ರವಿವಾರ ಶ್ರೀಕೃಷ್ಣ ಮಠಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸ್ವಹಸ್ತಾಕ್ಷರ ಲೇಖೀಸಿ ಈ ಪ್ರತಿಗಳನ್ನು ಹಸ್ತಾಂತರಿಸಿದರು. ವಿಧಾನಸಭೆಯ ಗ್ರಂಥಾಲಯದಲ್ಲಿ ಇದನ್ನು ರಕ್ಷಿಸಿ ಜನಪ್ರತಿನಿಧಿಗಳು ಓದುವಂತಾದರೆ ವಿದ್ವಾಂಸರ ಶ್ರಮ ಸಾರ್ಥಕ ಮತ್ತು ರಾಜಕಾರಣ ಮತ್ತಷ್ಟು ಪರಿಶುದ್ಧ ಹಾಗೂ ಪ್ರಭಾವಶಾಲಿಯಾಗುತ್ತದೆ ಎಂದು ಶ್ರೀಪಾದರು ನುಡಿದರು.

ಕಾಗೇರಿಯವರಿಗೂ ಒಂದು ಪ್ರತಿಯನ್ನು ಶ್ರೀಗಳು ನೀಡಿದರು. ಅವರು ಅತ್ಯಂತ ಸಂತೋಷದಿಂದ ಇದನ್ನು ಸ್ವೀಕರಿಸಿ, ವಿಧಾನ ಸಭೆಯ ಗ್ರಂಥಾಲಯಕ್ಕೆ ಕೊಂಡೊಯ್ಯುತ್ತೇನೆ. ಇದೊಂದು ಅಪೂರ್ವ ಅವಕಾಶ. ಇಂಥ ಮೌಲಿಕ ಗ್ರಂಥಗಳು ರಾಜಕಾರಣಿಗಳಿಗೆ ಲಭಿಸುವಂತಾಗ ಬೇಕು ಎಂದರು. ಶಾಸಕ ರಘುಪತಿ ಭಟ್‌ ಉಪಸ್ಥಿತರಿದ್ದರು.

ವಿದಾನಸಭೆಯ ಗ್ರಂಥಾಲಯಕ್ಕಾಗಿ ಮಹಾಭಾರತ ಸಂಪುಟವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಪಲಿಮಾರು ಶ್ರೀಗಳು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next