Advertisement
1. ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ದ್ರೌಪದಿಯು ಶಿವನ ಬಳಿ ತನಗೆ ಧರ್ಮನಿಷ್ಠ, ಧೈರ್ಯಶಾಲಿ, ಛಲಗಾರ, ಬುದ್ಧಿವಂತ, ಸುಂದರಾಂಗ ಗಂಡ ಸಿಗಲೆಂದು ತಪಸ್ಸು ಮಾಡಿದ್ದಳು. ಆ ಎಲ್ಲ ಗುಣಗಳು ಒಬ್ಬನಲ್ಲಿ ಇರದ ಕಾರಣ ಆಕೆ ಪಂಚ ಪಾಂಡವರ ಹೆಂಡತಿಯಾದಳು. ಹಾಗೆಯೇ ಹೂಡಿಕೆಯ ವಿಚಾರಕ್ಕೆ ಬಂದಾಗ ನಿಮಗೆ ಬೇಕಾದ ಎಲ್ಲ ಸಂಗತಿಗಳೂ ಒಂದೇ ಇನ್ವೆಸ್ಟ್‌ಮೆಂಟ್ ಕ್ಲಾಸ್‌ನಲ್ಲಿ ಇರಲು ಸಾಧ್ಯವಿಲ್ಲ. ಹಣ ಹೂಡುವ ಮುನ್ನ ನಿಮ್ಮ ಆದ್ಯತೆ ಯಾವುದೆಂದು ಗುರುತಿಸಿ, ನಂತರ ಇನ್ವೆಸ್ಟ್ ಮಾಡಿ.
ಶಿಶುಪಾಲನ ಸಾವು ಶ್ರೀಕೃಷ್ಣನ ಕೈಯಲ್ಲೇ ಎಂಬುದು ಪೂರ್ವನಿರ್ಧರಿತ ವಿಚಾರ. ಆದರೆ, “ನಿನ್ನ ಮಗನ ನೂರು ತಪ್ಪುಗಳನ್ನು ಕ್ಷಮಿಸುತ್ತೇನೆ’ ಎಂದು ಶ್ರೀಕೃಷ್ಣ ಶಿಶುಪಾಲನ ತಾಯಿಗೆ ಮಾತು ಕೊಟ್ಟು, ನೂರು ಬಾರಿ ಜೀವದಾನ ಮಾಡಿದ್ದ. ಅದೇ ರೀತಿ ಮ್ಯೂಚುವಲ್ ಫಂಡ್ಸ್‌ನಲ್ಲಿ ಇನ್ವೆಸ್ಟ್ ಮಾಡುವವರು ಶ್ರೀ ಕೃಷ್ಣನಂತೆ ತಾಳ್ಮೆ ವಹಿಸುವುದು ಅನಿವಾರ್ಯ. ಹೂಡಿಕೆ ಹಿಂಪಡೆಯುವ ಮುನ್ನ ಕನಿಷ್ಠ ನೂರು ಬಾರಿ ಯೋಚಿಸಿ. ಯಾಕಂದ್ರೆ, ನಿಮ್ಮ ಪೋರ್ಟ್‌ಫೋಲಿಯೊ ಲಿಸ್ಟ್‌ನಲ್ಲೂ ಶಿಶುಪಾಲನಿರಬಹುದು. 3. ಶಕುನಿ
ಶಕುನಿಯ ಕುತಂತ್ರದಿಂದ ಯುಧಿಷ್ಠಿರ ಜೂಜಿನಲ್ಲಿ ಸೋತು, ಸಕಲವನ್ನೂ ಕಳೆದುಕೊಂಡು ವನವಾಸಕ್ಕೆ ಹೋಗಬೇಕಾಯ್ತು. ಆ ಒಂದು ತಪ್ಪು ಮುಂದೆ ಕುರುಕ್ಷೇತ್ರ ಯುದ್ಧ ಭೂಮಿಯವರೆಗೂ ಬಂತು. ಹೂಡಿಕೆ ಜಗತ್ತಿನಲ್ಲಿಯೂ ನಿಮ್ಮ ದಿಕ್ಕು ತಪ್ಪಿಸುವ ಶಕುನಿಗಳಿದ್ದಾರೆ. ಅವರಿವರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ. ಸುಭದ್ರ ಹೂಡಿಕೆಯ ಮಾರ್ಗ ಯಾವುದು ಎಂದು ಅರಿತುಕೊಳ್ಳಿ.
Related Articles
ಚಕ್ರವ್ಯೂಹದ ಬಗ್ಗೆ ಅಪೂರ್ಣ ಮಾಹಿತಿ ಹೊಂದಿದ್ದ ಅಭಿಮನ್ಯು, ಅದರಿಂದ ಹೊರಬರಲಾಗದೆ ಮೃತಪಟ್ಟ ಕಥೆ ಗೊತ್ತೇ ಇದೆ. ಒಳ ನುಗ್ಗುವ ಮುನ್ನ, ಸ್ವಲ್ಪ ಯೋಚಿಸಿದ್ದರೂ ಜೀವ ಉಳಿಯುತ್ತಿತ್ತು. ಹೂಡಿಕೆಯ ವಿಚಾರದಲ್ಲಿ ನೀವು ಇಂಥ ತಪ್ಪು ಮಾಡಬೇಡಿ. ಹಣಕಾಸಿನ ಚಕ್ರವ್ಯೂಹದೊಳಗೆ ನುಗ್ಗುವವರಿಗೆ ಮಾರುಕಟ್ಟೆ ಬಗ್ಗೆ ಗರಿಷ್ಠ ಜ್ಞಾನ ಬೇಕು. ಇನ್ವೆಸ್ಟ್ ಮಾಡಲಿಚ್ಛಿಸುವ ಕಂಪನಿ, ಪ್ರಾಡಕ್ಟ್, ಫಂಡ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಆ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೆ, ಶ್ರೀಕೃಷ್ಣನಂಥ ಫಿನಾಶಿÒಯಲ್ ಅಡ್ವೆ„ಸರ್‌ನ ಸಲಹೆ ಪಡೆಯಿರಿ.
Advertisement
4. ಏಕಲವ್ಯಸ್ವಂತ ಪರಿಶ್ರಮ ಮತ್ತು ಛಲಕ್ಕೆ ಇನ್ನೊಂದು ಹೆಸರೇ ಏಕಲವ್ಯ. ದ್ರೋಣಾಚಾರ್ಯರ ಮೂರ್ತಿಯನ್ನೇ ಗುರು ಎಂದು ಪರಿಗಣಿಸಿ ಬಿಲ್ವಿದ್ಯೆ ಪ್ರವೀಣನಾದ. ಅದೇ ರೀತಿ, ಹಣಕಾಸು ವ್ಯವಹಾರದ ವಿಚಾರದಲ್ಲಿ ಎಲ್ಲರೂ ಏಕಲವ್ಯರೇ. ಇಂಟರ್ನೆಟ್ ಯುಗದಲ್ಲಿ ಸಿಗುವ ಸರಕುಗಳೇ ನಿಮ್ಮ ದ್ರೋಣಾಚಾರ್ಯರು. 5. ಪಾಂಡವ VS ಕೌರವ
ಪಾಂಡವರು ಐದು ಜನ, ಅದೇ ಕೌರವರು ನೂರು ಮಂದಿ. ಆದರೂ ಯುದ್ಧದಲ್ಲಿ ಪಾಂಡವರ ಕೈ ಮೇಲಾಯ್ತು. ಯಾಕೆಂದರೆ, ಕಡಿಮೆ ಜನರಿರುವ ತಂಡವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಸುಲಭ. ಹಾಗೆಯೇ ನಿಮ್ಮ ಹೂಡಿಕೆಯ ಪೋರ್ಟ್‌ಫೋಲಿಯೊದಲ್ಲಿಯೂ ಕಡಿಮೆ ಅಸೆಟ್‌ಗಳಿರಲಿ. 6. ಅರ್ಜುನ
ದ್ರೋಣಾಚಾರ್ಯರು ತಮ್ಮ ಶಿಷ್ಯರ ಏಕಾಗ್ರತೆಯನ್ನು ಪರೀಕ್ಷಿಸಲು ಒಂದು ಸ್ಪರ್ಧೆ ಏರ್ಪಡಿಸಿದರು. ಮರದ ಮೇಲೆ ಕೃತಕ ಹಕ್ಕಿಯನ್ನು ಕೂರಿಸಿ, ಕಣ್ಣಿಗೆ ಬಾಣ ಬಿಡುವಂತೆ ಸೂಚಿಸಿದರು. ಅರ್ಜುನನ್ನು ಬಿಟ್ಟು ಉಳಿದ ಎಲ್ಲರೂ, ಇದರಲ್ಲಿ ಸೋತು ಹೋದರು. ಹೂಡಿಕೆ ಕ್ಷೇತ್ರದಲ್ಲಿ ನಿಮಗೆ ಅರ್ಜುನನಷ್ಟೇ ಏಕಾಗ್ರ ಚಿತ್ತ ಬೇಕು. ಮಾರುಕಟ್ಟೆಯಲ್ಲಿ ಏನೇ ಬಿರುಗಾಳಿ ಎದ್ದರೂ, ನಿಮ್ಮ ಗುರಿ ಏನು ಎಂಬುದು ನಿಮಗೆ ಸ್ಪಷ್ಟವಾಗಿ ಗೊತ್ತಿರಬೇಕು. ಹೂಡಿಕೆಯ ವಿಷಯದಲ್ಲಿ ದೂರದೃಷ್ಟಿ, ಶಿಸ್ತು, ಸಂಯಮ ಮುಖ್ಯ.